ಕರ್ನಾಟಕ

karnataka

ETV Bharat / city

ರಾಮದುರ್ಗ: ಕೋವಿಡ್ ಪರೀಕ್ಷೆ ಇಲ್ಲದೆ ವಿದ್ಯಾರ್ಥಿಗಳ ಪರದಾಟ

ಶಾಲಾ-ಕಾಲೇಜು ಆರಂಭವಾದ ಹಿನ್ನೆಲೆ ಕೋವಿಡ್ ಪರೀಕ್ಷೆಗಾಗಿ ವಿದ್ಯಾರ್ಥಿಗಳು ರಾಮದುರ್ಗ ತಾಲೂಕು ಆಸ್ಪತ್ರೆಗೆ ಬಂದಿದ್ದರು. ಆದರೆ ಆಸ್ಪತ್ರೆ ಸಿಬ್ಬಂದಿ ಕೋವಿಡ್ ಪರೀಕ್ಷೆ ನಡೆಸದೆ ಆ್ಯಂಟಿಜೆನ್ ಕಿಟ್ ಖಾಲಿಯಾಗಿವೆ. ನಾಳೆ ಬನ್ನಿ ಎಂದು ದಿನಾಲೂ ಸತಾಯಿಸುತ್ತಿದ್ದಾರಂತೆ.

By

Published : Jan 4, 2021, 3:21 PM IST

problem-of-the-students-who-came-for-the-covid-test
ಕೋವಿಡ್ ಪರೀಕ್ಷೆಯಿಲ್ಲದೇ ವಿದ್ಯಾರ್ಥಿಗಳ ಪರದಾಟ

ಬೆಳಗಾವಿ:ಕೋವಿಡ್ ಪರೀಕ್ಷೆಯಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿರುವ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.

ಕೋವಿಡ್ ಪರೀಕ್ಷೆಯಿಲ್ಲದೆ ವಿದ್ಯಾರ್ಥಿಗಳ ಪರದಾಟ

ಜನವರಿ ಒಂದರಿಂದ ಶಾಲಾ-ಕಾಲೇಜುಗಳು ಆರಂಭವಾಗಿವೆ. ವಿದ್ಯಾರ್ಥಿಗಳು ಶಾಲೆಗೆ ತೆರಳಬೇಕಾದರೆ ಕೊರೊನಾ ಟೆಸ್ಟ್​ ಕಡ್ಡಾಯವಾಗಿದೆ. ಹೀಗಾಗಿ ಹಲವಾರು ವಿದ್ಯಾರ್ಥಿಗಳು ಕೊರೊನಾ ಪರೀಕ್ಷೆಗಾಗಿ ರಾಮದುರ್ಗ ತಾಲೂಕು ಆಸ್ಪತ್ರೆಗೆ ಬಂದಿದ್ದರು. ಆದರೆ ಆಸ್ಪತ್ರೆ ಸಿಬ್ಬಂದಿ ಕೋವಿಡ್ ಪರೀಕ್ಷೆ ನಡೆಸದೆ, ಆ್ಯಂಟಿಜೆನ್ ಕಿಟ್ ಖಾಲಿಯಾಗಿವೆ. ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ದಿನಾಲೂ ಸತಾಯಿಸುತ್ತಿದ್ದಾರಂತೆ.

ಜೊತೆಗೆ ವೈದ್ಯರು ಹಾಗೂ ನರ್ಸಿಂಗ್ ಸ್ಟಾಫ್​ ಸರಿಯಾಗಿ ಆಸ್ಪತ್ರೆಗೆ ಬರುತ್ತಿಲ್ಲ. ಹೀಗಾಗಿ ವೈದ್ಯಕೀಯ ಸಿಬ್ಬಂದಿಯ ಬೇಜವಾಬ್ದಾರಿ ವಿರುದ್ಧ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details