ಕರ್ನಾಟಕ

karnataka

ETV Bharat / city

ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಕೈದಿ ಆತ್ಮಹತ್ಯೆ! - Belgavi latest crime news

ಪತ್ನಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

By

Published : Oct 21, 2021, 3:28 PM IST

ಬೆಳಗಾವಿ: ಕೈದಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ಹಿಂಡಲಗಾ ಕಾರಾಗೃಹದ ಆವರಣದಲ್ಲಿರುವ ಹಳೆ ಕ್ವಾರ್ಟರ್ಸ್​‌ನಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ನಿಂಗಪ್ಪ ಬುಗ್ಗಿಪೂಜಾರಿ ಮೃತ ದೇಹ

ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ನಿಂಗಪ್ಪ ಬುಗ್ಗಿಪೂಜಾರಿ (48) ನೇಣಿಗೆ ಶರಣಾಗಿರುವ ಕೈದಿ. 10 ವರ್ಷಗಳ ಹಿಂದೆ ಪತ್ನಿ ಕೊಲೆ ಪ್ರಕರಣದಡಿ ನಿಂಗಪ್ಪ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ. ಪ್ರಸ್ತುತ ಈತ ಹಿಂಡಲಗಾ ಜೈಲಿನ ಹೊರತೋಟ ಕೆಲಸಕ್ಕೆ ನೇಮಕವಾಗಿದ್ದ.

ಕೈದಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ‌. ಈ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details