ಕರ್ನಾಟಕ

karnataka

ETV Bharat / city

ಉಪಚುನಾವಣೆಗೆ ಅಥಣಿಯಲ್ಲಿ ಸಕಲ ಸಿದ್ಧತೆ.. ಹೀಗಿದೆ ಕ್ಷೇತ್ರದ ಸ್ಟ್ಯಾಟಿಸ್ಟಿಕ್ಸ್​ - ಉಪಚುನಾವಣೆಗೆ ಅಥಣಿಯಲ್ಲಿ ಸಕಲ ಸಿದ್ಧತೆ

ಉಪಚುನಾವಣೆ ಸಮೀಪಿಸುತ್ತಿದ್ದು, ಬೆಳಗಾವಿ ಜಿಲ್ಲೆಯ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ.

ಅಥಣಿ

By

Published : Nov 11, 2019, 8:13 PM IST

ಅಥಣಿ: ಉಪಚುನಾವಣೆಗೆ ಬೆಳಗಾವಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಅಥಣಿ ವಿಧಾನಸಭಾ ಕ್ಷೇತ್ರ ಭರ್ಜರಿ ತಯಾರಿ ನಡೆಸಿದೆ.

ಉಪಚುನಾವಣೆಗೆ ಅಥಣಿಯಲ್ಲಿ ಸಕಲ ಸಿದ್ಧತೆ...

ಅಥಣಿ ವಿಧಾನಸಭಾ ಕ್ಷೇತ್ರದ 69 ಹಳ್ಳಿಗಳ 1,12,176 ಪುರುಷ, 1,05,796 ಮಹಿಳಾ ಮತದಾರರು ಹಾಗೂ ಇತರೆ 2 ಸೇರಿ ಒಟ್ಟು 2,17,974 ಮತದಾರರು ಇದ್ದಾರೆ.‌ ಬಿಜೆಪಿ ಪಕ್ಷದದಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ತಿಳಿದು ಬಂದಿಲ್ಲ. ಅನರ್ಹ ಶಾಸಕ ಮಹೇಶ್ ಕುಮಟಳ್ಳಿಗೆ ಬಿ ಫಾರ್ಮ್ ನೀಡುತ್ತಾರೋ ಅಥವಾ ಡಿಸಿಎಂ ಲಕ್ಷ್ಮಣ್ ಸವದಿಗೆ ಮರು ಮಣೆ ಹಾಕುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಒಂದು ಕಡೆ ಕಾಗವಾಡ ಮಾಜಿ ಶಾಸಕ ರಾಜು ಕಾಗೆ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪಕ್ಷದಲ್ಲಿ 20ಕ್ಕೂ ಹೆಚ್ಚು ಜನರು ಟಿಕೆಟ್ ಆಕಾಂಕ್ಷಿಗಳಿದ್ದು, ರಾಜು ಕಾಗೆ ಸ್ಪರ್ಧೆ ಮಾಡಿದ್ದೇಯಾದರೆ ಕಾಂಗ್ರೆಸ್​​ನಲ್ಲಿ ಬಂಡಾಯದ ಬಾವುಟ ಪ್ರದರ್ಶನ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇನ್ನು ಈ ಬಾರಿ ಕೂಡ ಜೆಡಿಎಸ್ ಪಕ್ಷದ ಪ್ರಭಾವ ಕ್ಷೇತ್ರದಲ್ಲಿ ಎದ್ದು ಕಾಣುತ್ತಿಲ್ಲ.

ABOUT THE AUTHOR

...view details