ಕರ್ನಾಟಕ

karnataka

ETV Bharat / city

ಬೆಳಗಾವಿ : ಭೀಕರ ಅಪಘಾತದಲ್ಲಿ ಗರ್ಭಿಣಿ ಸಾವು, ತಂದೆಯ ಸ್ಥಿತಿ ಚಿಂತಾಜನಕ - belagavi accident news

ಕೆಲಸದ ನಿಮಿತ್ತ ತಂದೆ-ಮಗಳು ಇಬ್ಬರು ಬೈಕ್​ನಲ್ಲಿ ಗೋಕಾಕ್​​ಗೆ ತೆರಳುವ ಸಂದರ್ಭದಲ್ಲಿ ಸಂಗನಕೇರಿ ಬಳಿಯ ಜತ್ತ-ಜಾoಬೋಟಿ ರಾಜ್ಯ ಹೆದ್ದಾರಿಯಲ್ಲಿ ಸಿಲಿಂಡರ್ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ‌. ಪರಿಣಾಮ, ನೆಲಕ್ಕೆ ಅಪ್ಪಳಿಸಿದ ಶಾಮಲಾ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ..

pregnant died by accident in belagavi
ಭೀಕರ ಅಪಘಾತದಲ್ಲಿ ಗರ್ಭಿಣಿ ಸಾವು

By

Published : Aug 17, 2021, 5:21 PM IST

ಬೆಳಗಾವಿ :ಬೈಕ್​ಗೆ ಹಿಂಬದಿಯಿಂದ ಸಿಲಿಂಡರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲೆ ತಂದೆಯೊಂದಿಗೆ ತೆರಳುತ್ತಿದ್ದ ಗರ್ಭಿಣಿಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಗನಕೇರಿ ಬಳಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಅಪಘಾತದಲ್ಲಿ ಪುತ್ರಿ ಸಾವನ್ನಪ್ಪಿದ್ದು, ತಂದೆಯ ಸ್ಥಿತಿ ಗಂಭೀರವಾಗಿದೆ.

ಭೀಕರ ಅಪಘಾತದಲ್ಲಿ ಗರ್ಭಿಣಿ ಸಾವು

ಗೋಕಾಕ್​​ ತಾಲೂಕಿನ ಶಾಮಲಾ ಸುರೇಶ ಶಿವಾಪುರ(23) ಮೃತ ದುರ್ದೈವಿ. ತಂದೆ ಸಿದ್ದಪ್ಪ ಪುಂಡಲೀಕ್ ಮನ್ನಿಕೇರಿ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಕೆಲಸದ ನಿಮಿತ್ತ ತಂದೆ-ಮಗಳು ಇಬ್ಬರು ಬೈಕ್​ನಲ್ಲಿ ಗೋಕಾಕ್​​ಗೆ ತೆರಳುವ ಸಂದರ್ಭದಲ್ಲಿ ಸಂಗನಕೇರಿ ಬಳಿಯ ಜತ್ತ-ಜಾoಬೋಟಿ ರಾಜ್ಯ ಹೆದ್ದಾರಿಯಲ್ಲಿ ಸಿಲಿಂಡರ್ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ‌. ಪರಿಣಾಮ, ನೆಲಕ್ಕೆ ಅಪ್ಪಳಿಸಿದ ಶಾಮಲಾ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಮನೆಯಂಗಳದಲ್ಲಿ ಆಟವಾಡುವಾಗ ಕುಸಿದು ಬಿದ್ದು ಬಾಲಕಿ ಸಾವು

ಮೃತಳಿಗೆ ಓರ್ವ ಗಂಡು ಮಗುವಿದೆ. ಅಲ್ಲದೇ ಈಗ ಆಕೆ ಗರ್ಭಿಣಿಯಾಗಿದ್ದರು ಎಂಬ ಮಾಹಿತಿ ದೊರೆತಿದೆ. ಇನ್ನು, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಂದೆಯನ್ನು ಸ್ಥಳೀಯರು ಹೆಚ್ಚಿನ ಚಿಕಿತ್ಸೆಗೆಂದು ಗೋಕಾಕ್​​ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಘಟಪ್ರಭಾ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details