ಕರ್ನಾಟಕ

karnataka

ETV Bharat / city

ಒಣಗಿದ ನದಿ ನೋಡಲು ಡಿಕೆಶಿ ಬರ್ತಿದ್ದಾರೋ ಹೊರತು, ರೈತರ ಕಷ್ಟ ಕೇಳಲಲ್ಲ: ತಿವಿದ ಕೋರೆ - undefined

ಬೆಳಗಾವಿಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಪ್ರವಾಸ ಕೈಗೊಂಡಿದ್ದು, ಸಮಸ್ಯೆ ಉಲ್ಭಣವಾದಾಗ ಬರದಿದ್ದವರು ಈಗ ಒಣಗಿದ ನದಿ ನೋಡಲು ಬಂದಿದ್ದಾರೆ ಎಂದು ಪ್ರಭಾಕರ್​​ ಕೋರೆ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ

By

Published : Jun 22, 2019, 8:09 PM IST

ಬೆಳಗಾವಿ:ಸಮಸ್ಯೆ ಉಲ್ಭಣವಾದ ಸಮಯದಲ್ಲಿ ಬಾರದ ಸಚಿವರು ಈಗ ಬತ್ತಿ ಒಣಗಿ ಹೋಗಿರುವ ನದಿ ನೋಡಲು ಬಂದಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ್​ ಕೋರೆ, ಸಚಿವ ಡಿಕೆಶಿ ಕಾಲೆಳೆದರು.

ನಗರದ ಗಾಂಧಿ ಭವನದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೀರಿನ ಅಭಾವದಿಂದ ಕೃಷ್ಣಾ ನದಿ ಪಾತ್ರದ ಜನ-ಜಾನುವಾರುಗಳ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟ ಸಮಯದಲ್ಲಿ ಬಾರದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್,​ ಈಗ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಒಣಗಿದ ನದಿ ನೋಡಲು ಸಚಿವರು ಬರುತ್ತಿದ್ದಾರೆಯೇ ಹೊರತು ನಮ್ಮ ರೈತರ ಸಮಸ್ಯೆ ಆಲಿಸಲು ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ್​ ಕೋರೆ

ಬೆಳಗಾವಿ ಕ್ಷೇತ್ರದಿಂದ ಸಂಸದರ ಪೈಕಿ ಕೇಂದ್ರದಲ್ಲಿ ಸಚಿವರಾದವರು ತೀರಾ ವಿರಳ. ಕಾಂಗ್ರೆಸ್​ನಿಂದ ಆಯ್ಕೆಯಾಗಿದ್ದ ಬಲವಂತರಾವ್ ದಾತಾರ, ನಂತರ ಬಾಬಾಗೌಡ ಪಾಟೀಲ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ಇದೀಗ ಸುರೇಶ್​​ ಅಂಗಡಿ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದ್ದು, ಈ ಕ್ಷೇತ್ರದಿಂದ ಮಂತ್ರಿ ಆದ ಮೂರನೇ ಸಂಸದ ಇವರಾಗಿದ್ದಾರೆ. ಅದೂ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸುರೇಶ್​ ಅಂಗಡಿ ಮಂತ್ರಿ ಆಗಿದ್ದು, ಹೆಚ್ಚಿನ ಅಭಿವೃದ್ಧಿ ಕೆಲಸ ಆಗುವ ನಿರೀಕ್ಷೆ ಇದೆ. ಈ ಹಿಂದೆ ರಾಜ್ಯದ ಹಲವರು ರೈಲ್ವೆ ಮಂತ್ರಿ ಆಗಿದ್ದರು. ಆದರೆ ಯಾವ ಯೋಜನೆಗಳೂ ಸಮರ್ಪಕವಾಗಿ ಅನುಷ್ಠಾನ ಆಗಲಿಲ್ಲ. ಆದರೆ ಇದೀಗ ಮೋದಿ ಸರ್ಕಾರ ಮತ್ತೊಮ್ಮೆ ಬಂದಿದ್ದು, ಸುರೇಶ್​​ ಅಂಗಡಿಯೂ ರೈಲ್ವೆ ಮಂತ್ರಿ ಆಗಿರುವುದು ರಾಜ್ಯಕ್ಕೆ ಹೆಚ್ಚಿನ ಕೊಡುಗೆ ಅವರಿಂದ ಬರಲಿ ಎಂದು ಆಶಿಸುತ್ತೇನೆ ಎಂದರು.

For All Latest Updates

TAGGED:

ABOUT THE AUTHOR

...view details