ಕರ್ನಾಟಕ

karnataka

ETV Bharat / city

ನಡುಗಡ್ಡೆಯಲ್ಲಿ ಸಿಲುಕಿದ ವೃದ್ದೆಯ ರಕ್ಷಣೆ.. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್​ ಸಾಧ್ಯತೆ - Krishna River news

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಯಾವುದೇ ಕ್ಷಣದಲ್ಲಾದರೂ ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಲಿದೆ.

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್​ ಸಾಧ್ಯತೆ

By

Published : Aug 5, 2019, 9:32 PM IST

ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಕೃಷ್ಣಾ ನದಿ ಅಪಾಯಮಟ್ಟ ದಾಟಿ ಹರಿಯುತ್ತಿದ್ದು, ನಡುಗಡ್ಡೆಯಲ್ಲಿ ಸಿಲುಕಿರುವ ವೃದ್ದೆಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಪ್ರವಾಹ ಪರಿಸ್ಥಿತಿ ತೀವ್ರಗೊಂಡಿದ್ರಿಂದಾಗಿ ಯಾವುದೇ ಕ್ಷಣದಲ್ಲಾದರೂ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗುವ ಸಾಧ್ಯತೆ.

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್​ ಸಾಧ್ಯತೆ

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಪಂಚಗಂಗಾ ನದಿಯ ಸೇತುವೆ ಬಳಿಯ ರಸ್ತೆ ಸುತ್ತ ನೀರು ಆವರಿಸಿದೆ. ಅಷ್ಟೇ ಅಲ್ಲ, ನಗರವನ್ನು ಸಹ ನೀರು ಪ್ರವೇಶಿಸಿದ್ದು, ಇದರಿಂದ ಕೊಲ್ಲಾಪುರ ಜನತೆ ಕಂಗಾಲಾಗಿದ್ದಾರೆ.

ನಡುಗಡ್ಡೆಯಲ್ಲಿ ಸಿಲುಕಿದ ವೃದ್ದೆಯ ರಕ್ಷಣೆ

ಕೃಷ್ಣಾ ನದಿ ಅಪಾಯಮಟ್ಟ ದಾಟಿ ಹರಿಯುತ್ತಿದ್ದು, ಕರ್ನಾಟಕ ಗಡಿ ಭಾಗದ ಗ್ರಾಮಗಳಲ್ಲಿ ಆತಂಕ ಸೃಷ್ಟಿಸಿದೆ. ಈ ನಡುವೆ ನಡುಗಡ್ಡೆಯಲ್ಲಿ ಸಿಲುಕಿದ್ದ ವೃದ್ದೆಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಇನ್ನೂ ಜನವಾಡ ಗ್ರಾಮದ ಚೌಗಲಾ, ಕುಡಚೆ ತೋಟದ ನಿವಾಸಿಗಳ 7 ಕುಟುಂಬಗಳು ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದು, 30ಕ್ಕೂ ಅಧಿಕ ಜನ ಮತ್ತು 40 ಜಾನುವಾರುಗಳು ಪರದಾಡುವಂತಾಗಿದೆ. ಇವರ ರಕ್ಷಣೆಗೆ ಧಾವಿಸದ‌ ಜಿಲ್ಲಾಡಳಿತದ ವಿರುದ್ದ ಜನವಾಡ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details