ಬೆಳಗಾವಿ:ವಿದ್ಯಾರ್ಥಿನಿ ಜೊತೆಗಿನ ಅಶ್ಲೀಲ ಫೋಟೋಗಳನ್ನು ಸ್ಟೇಟಸ್ ಇಟ್ಟುಕೊಂಡ ಶಿಕ್ಷಕನಿಗೆ ಗ್ರಾಮಸ್ಥರು ಧರ್ಮದೇಟು ನೀಡಿ, ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಸವದತ್ತಿ ತಾಲೂಕಿನ ಗ್ರಾಮವೊಂದರ ಪ್ರೌಢ ಶಾಲಾ ಶಿಕ್ಷಕ ಮಹೇಶ್ ಬಿರಾದಾರ (44) ವಿರುದ್ಧ ವಿದ್ಯಾರ್ಥಿನಿ ಪೋಷಕರು ಪೋಕ್ಸೋ ಕಾಯ್ದೆ ಅಡಿ ಸವದತ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೂಲತಃ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಬೈರವಾಡ ಗ್ರಾಮದ ಆರೋಪಿ ದೈಹಿಕ ಶಿಕ್ಷಕರಾಗಿದ್ದಾರೆ. ವಿದ್ಯಾರ್ಥಿನಿ ಶಾಲೆಗೆ ಬರುತ್ತಿದ್ದ ವೇಳೆ ಮದುವೆಯಾಗುವುದಾಗಿ ನಂಬಿಸಿ, ಆಕೆಯನ್ನು ಶಿಕ್ಷಕ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಜೊತೆಗೆ ವಿದ್ಯಾರ್ಥಿನಿ ಜೊತೆಗಿನ ಅಶ್ಲೀಲ ಫೋಟೋಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿದುಕೊಂಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಮದುವೆ ನಿಲ್ಲಿಸಲು ಸ್ಟೇಟಸ್ ಹಾಕಿ ಸಿಕ್ಕಿಬಿದ್ದ ಶಿಕ್ಷಕನಿಗೆ ಧರ್ಮದೇಟು (ಇದನ್ನೂ ಓದಿ:ಸಹಾಯಕ ಪ್ರಾಧ್ಯಾಪಕನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ.. ಗರ್ಭಿಣಿಯಾದ ಬಿ.ಕಾಂ ವಿದ್ಯಾರ್ಥಿನಿ!)
ವಿದ್ಯಾರ್ಥಿನಿಗೆ ಸದ್ಯ ಬೇರೆ ಯುವಕನೊಂದಿಗೆ ಮದುವೆ ನಿಗದಿಯಾಗಿತ್ತು. ಆದ್ದರಿಂದ ಯುವತಿಯ ಮದುವೆ ನಿಲ್ಲಿಸಲು ತಮ್ಮ ಬಳಿ ಇದ್ದ ಖಾಸಗಿ ಫೋಟೋಗಳನ್ನು ಶಿಕ್ಷಕ ತನ್ನ ಮೊಬೈಲ್ ಸ್ಟೇಟಸ್ನಲ್ಲಿ ಇಟ್ಟುಕೊಂಡಿದ್ದ. ಆ ಬಳಿಕ ಫೋಟೋಗಳು ವೈರಲ್ ಆಗಿದ್ದವು. ಗ್ರಾಮಸ್ಥರು ಮತ್ತು ಪೋಷಕರು ಇದನ್ನು ಗಮನಿಸಿ, ಶಾಲೆಗೆ ಆಗಮಿಸಿ ಶಿಕ್ಷಕನಿಗೆ ಹೊಡೆದಿದ್ದಾರೆ. ಆ ಬಳಿಕ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಸದ್ಯ ಶಿಕ್ಷಕನ ವಿರುದ್ಧ ಫೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
(ಇದನ್ನೂ ಓದಿ: ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಉಗ್ರನ ತನಿಖೆ: ಮೊಬೈಲ್ ಕರೆಗಳ ಮಾಹಿತಿ ಕೋರಿ ಸಿಮ್ ಕಂಪೆನಿಗೆ ಪತ್ರ)