ಬೆಳಗಾವಿ: ಕೃಷಿ ಕಾಯ್ದೆ ವಿರೋಧಿಸಿ ಜ. 26 ರಂದು ನಡೆಯಲಿರುವ ಟ್ಯಾಕ್ಟರ್ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ತೆರಳುತ್ತಿದ್ದ ರೈತರನ್ನು ಮಾರ್ಗ ಮಧ್ಯ ಪೊಲೀಸರು ತಡೆಯುತ್ತಿದ್ದಾರೆ ಎಂದು ಆರೋಪಿಸಿ ರೈತ ಮುಖಂಡರು ನಗರದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡಸಿದರು.
ಇಂದು ಬೆಳಗ್ಗೆ ನಗರದ ಚೆನ್ನಮ್ಮ ವೃತ್ತದಿಂದ ಬೆಂಗಳೂರಿಗೆ ಹೋಗಲು ರೈತರು ಸಿದ್ಧತೆ ನಡೆಸಿದ್ದರು. ಟ್ರಾಕ್ಟರ್ಗಳ ಮೂಲಕ ರೈತರು ಚನ್ನಮ್ಮ ವೃತ್ತಕ್ಕೆ ಬರುವ ಮೊದಲೇ ಟ್ರ್ಯಾಕ್ಟರ್ ಸಮೇತ ರೈತರನ್ನು ಪೊಲೀಸರು ವಶಕ್ಕೆ ಪಡೆದರು.