ಕರ್ನಾಟಕ

karnataka

ETV Bharat / city

ಬೆಳಗಾವಿಯಲ್ಲಿ ಸಚಿವ ಅಶ್ವತ್ಥ್ ನಾರಾಯಣ-ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಸಾಧ್ಯತೆ ಹಿನ್ನೆಲೆ ಬಿಗಿ ಬಂದೋಬಸ್ತ್ - ಬೆಳಗಾವಿಯಲ್ಲಿ ಕಾಂಗ್ರೆಸ್​ ಪ್ರತಿಭಟನೆ

ಸಿಎಂ ಎದುರೇ ಸಂಸದ ಡಿ.ಕೆ. ಸುರೇಶ್, ಸಚಿವ ಅಶ್ವತ್ಥ್ ನಾರಾಯಣ ಜಟಾಪಟಿ ಪ್ರಕರಣ ಹಿನ್ನೆಲೆ ಇಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಾಧ್ಯತೆ ಇರುವುದರಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ..

police high alert in Belagavi
ಬೆಳಗಾವಿಯಲ್ಲಿ ಪೊಲೀಸ್​ ಬಿಗಿ ಬಂದೋಬಸ್ತ್

By

Published : Jan 5, 2022, 11:52 AM IST

Updated : Jan 5, 2022, 12:05 PM IST

ಬೆಳಗಾವಿ :ಇಂದು ಬೆಳಗಾವಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಸಚಿವ ಸಿ.ಎನ್. ಅಶ್ವತ್ಥ್ ನಾರಾಯಣ ಭಾಗಿಯಾಗಲಿರುವ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಹಾಗಾಗಿ, ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ.

ಬೆಳಗಾವಿಯಲ್ಲಿ ಪೊಲೀಸ್​ ಬಿಗಿ ಬಂದೋಬಸ್ತ್

ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥ್ ನಾರಾಯಣ ಇಂದು ವಿಶ್ವೇಶ್ವರ ತಾಂತ್ರಿಕ ವಿವಿಯಲ್ಲಿ ಟೆಕ್ ಭಾರತ್ 2022 ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸುಭಾಷ್ ನಗರದಲ್ಲಿ ಸ್ನೇಹಿತ ಸಚಿನ್ ಹಂಜಿ ಮನೆಗೆ ಉಪಹಾರಕ್ಕೆಂದು ಭೇಟಿ ಕೊಟ್ಟಿದ್ದರು. ಸುಭಾಷ್ ನಗರದ ಸಚಿನ್ ಹಂಜಿ ನಿವಾಸದ ಬಳಿಯೂ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

ಸಿಎಂ ಎದುರೇ ಸಂಸದ ಡಿ.ಕೆ. ಸುರೇಶ್, ಸಚಿವ ಅಶ್ವತ್ಥ್ ನಾರಾಯಣ ಜಟಾಪಟಿ ಪ್ರಕರಣ ಹಿನ್ನೆಲೆ ಇಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಾಧ್ಯತೆ ಇರುವುದರಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಇದನ್ನೂ ಓದಿ:ವಿದೇಶದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ 25 ಜನರಿಗೆ ಕೋವಿಡ್

ಸಚಿವರು ವಿಟಿಯುಗೆ ತೆರಳಿಲಿದ್ದಾರೆ. ಅಲ್ಲಿಂದ ಮಧ್ಯಾಹ್ನ ಖಾನಾಪುರಕ್ಕೆ ಬರಲಿದ್ದಾರೆ. ಖಾನಾಪುರದಲ್ಲಿ ವಾಯವ್ಯ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಉದ್ಘಾಟಿಸಿದ ಬಳಿಕ ಸಂಜೆ ಬೆಳಗಾವಿ ನಗರಕ್ಕೆ ವಾಪಸ್ ಆಗಲಿದ್ದಾರೆ. ಸಂಜೆ ಖಾಸಗಿ ಕಂಪನಿಗಳ ಸಿಇಒಗಳ ಜೊತೆ ಸಭೆ ನಡೆಸಿ ಹುಬ್ಬಳ್ಳಿಗೆ ತೆರಳಿ ರಾತ್ರಿ ಹುಬ್ಬಳ್ಳಿಯಿಂದ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

Last Updated : Jan 5, 2022, 12:05 PM IST

ABOUT THE AUTHOR

...view details