ಕರ್ನಾಟಕ

karnataka

ETV Bharat / city

ಆಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯನ್ನೇ ಕೊಂದ ಪಾಪಿ ಪತಿ ಅರೆಸ್ಟ್​​​​ - undefined

ಪತ್ನಿಯನ್ನು ಕೊಲೆ ಮಾಡಿ ಪೊಲೀಸ್​ ಠಾಣೆಗೆ ಬಂದು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ ಪಾಪಿ ಪತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಪ್ಪಾಸಾಹೇಬ ಸುರುಡೆ

By

Published : Jun 13, 2019, 7:31 PM IST

ಚಿಕ್ಕೋಡಿ: ಇನ್ನೊಬ್ಬಳ ಜೊತೆ ಆಕ್ರಮ ಸಂಬಂಧ ಹೊಂದಿದ್ದನ್ನು ಪ್ರಶ್ನಿಸಿದಕ್ಕೆ ಮಡದಿಯನ್ನೇ ಕೊಂದ ಕಿರಾತಕ ಇಂದು ಪೊಲೀಸರ ಅತಿಥಿಯಾಗಿದ್ದಾನೆ.

ಅಪ್ಪಾಸಾಹೇಬ ಸುರುಡೆ (42) ಬಂಧಿತ ಆರೋಪಿ. ಅಥಣಿ ತಾಲೂಕಿನ ವಿಷ್ಣುವಾಡಿ ಬಳಿ ತನ್ನ ಹೆಂಡತಿ ಉಮಾಶ್ರೀ ಅಪ್ಪಾಸಾಹೇಬ ಸುರುಡೆ (35) ಎಂಬವವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ನಂತರ ಉಮಾಶ್ರೀ ಜೂನ್​ 6ರಿಂದ ಕಾಣೆಯಾಗಿದ್ದಾಳೆ ಎಂದು ಅಥಣಿ ಠಾಣೆಗೆ ದೂರು ನೀಡಿದ್ದ.

ಅಷ್ಟೇ ಅಲ್ಲದೇ ಹೆಂಡತಿಯನ್ನು ಕೊಲೆ ಮಾಡಿ ವಿಷ್ಣುವಾಡಿ ಎಂಬ ಗ್ರಾಮದ ಹೊಲದಲ್ಲಿ ಗೋಣಿ ಚೀಲ ಕಟ್ಟಿ ಎಸೆದಿದ್ದ ಎನ್ನಲಾಗಿದೆ. ಸ್ಥಳೀಯರು ಏನೋ ಕೆಟ್ಟ ‌ವಾಸನೆ ಬರುತ್ತಿದೆ ಎಂದು ನೋಡಿದಾಗ ಅಲ್ಲಿ ಉಮಾಶ್ರೀಯ ಹೆಣ ಪತ್ತೆಯಾಗಿದೆ. ನಂತರ ಪತಿ ಅಪ್ಪಾಸಾಹೇಬನ ಮೇಲೆ ಸಂಶಯ ಮೂಡಿ ಬಂದ ಹಿನ್ನೆಲೆ ಪೊಲೀಸರು ವಿಚಾರಣೆ ಮಾಡಿದಾಗ ಸತ್ಯಾಂಶ ಬಯಲಾಗಿದೆ.

ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

For All Latest Updates

TAGGED:

ABOUT THE AUTHOR

...view details