ಬೆಳಗಾವಿ:ಕಿಡಿಗೇಡಿಗಳ ಅಪಮಾನಕ್ಕೆ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಪಟ್ಟಣದಲ್ಲಿ ಕೊರೊನಾ ವಾರಿಯರ್ ಕಣ್ಣೀರಿಟ್ಟಿದ್ದಾರೆ.
ಕೊರೊನಾ ವಾರಿಯರ್ಗೆ ಅಪಮಾನ: ಕಣ್ಣೀರಿಟ್ಟ ಮಹಿಳಾ ಸಿಬ್ಬಂದಿ
ಸೀಲ್‌ಡೌನ್ ಪ್ರದೇಶಕ್ಕೆ ತೆರಳಿದ್ದ ಕೊಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಮಹಿಳಾ ಸಿಬ್ಬಂದಿಗೆ ಕಿಡಿಗೇಡಿಗಳು ಅಪಮಾನ ಮಾಡಿದ್ದಾರೆ.
ಕೊರೊನಾ ವಾರಿಯರ್ಗೆ ಅಪಮಾನ
ಕೊಣ್ಣೂರು ಪಟ್ಟಣದ ಸೀಲ್‌ಡೌನ್ ಪ್ರದೇಶಕ್ಕೆ ತೆರಳಿದ್ದ ಕೊಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಮಹಿಳಾ ಸಿಬ್ಬಂದಿಗೆ ಕಿಡಿಗೇಡಿಗಳು ಅಪಮಾನಿಸಿದ್ದಾರೆ. ನಮಗೂ ನಿಮ್ಮ ತರಹದ ಬಟ್ಟೆ ಕೊಟ್ಟರೆ ತಪಾಸಣೆ ಮಾಡ್ತೀವಿ ಅಂತ ಕೆಲವರು ರೇಗಿಸಿದ್ದಾರೆ. ಕಿಡಗೇಡಿಗಳ ವರ್ತನೆಗೆ ಕಣ್ಣೀರಿಟ್ಟ ಅವರು, ನಾಳೆ ಬೇರೆ ಕಡೆ ಕೆಲಸಕ್ಕೆ ನಿಯೋಜಿಸುವಂತೆಯೂ ಹಿರಿಯ ಅಧಿಕಾರಿಗಳ ಬಳಿ ಕೇಳಿಕೊಂಡರು.
ಈ ವೇಳೆ, ಸ್ಥಳದಲ್ಲಿದ್ದ ಕೊಣ್ಣೂರು ಪುರಸಭೆ ಅಧಿಕಾರಿಗಳು ಕಿಡಿಗೇಡಿಗಳನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ.