ಬೆಳಗಾವಿ: ಕೊರೊನಾ ಸೋಂಕಿತರ ಸಂಖ್ಯೆ ಒಂದೇ ಸಮನೆ ಏರುತ್ತಿದ್ದರೂ ಕುಂದಾನಗರಿ ಜನ ಮಾತ್ರ ಬುದ್ಧಿ ಕಲಿಯುತ್ತಿಲ್ಲ.
ಸೋಂಕಿತರ ಸಂಖ್ಯೆ ಏರುತ್ತಿದ್ದರೂ ಬುದ್ಧಿ ಕಲಿಯದ ಕುಂದಾನಗರಿ ಜನ - lockdown violation
ಬೆಳಗಾವಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದ್ದರೂ ಜನರು ಮಾತ್ರ ಮಾರುಕಟ್ಟೆಯಲ್ಲಿ ಗುಂಪುಗುಂಪಾಗಿ ಹಣ್ಣು ಖರೀದಿಸುವ ಮೂಲಕ ಲಾಕ್ಡೌನ್ ಉಲ್ಲಂಘನೆ ಮಾಡುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಜನಸಂದಣಿ
ಲಾಕ್ಡೌನ್ ನಡುವೆಯೂ ಬೆಳಗಾವಿಯ ಗಾಂಧಿನಗರದ ಸಗಟು ಹಣ್ಣಿನ ಮಾರುಕಟ್ಟೆ ಜನಜಂಗುಳಿಯಿಂದ ತುಂಬಿದೆ. ಯಾರೊಬ್ಬರೂ ಸಾಮಾಜಿಕ ಅಂತರ ಕಾಪಿಟ್ಟುಕೊಳ್ಳದೆ ಹಣ್ಣಿನ ಖರೀದಿಗೆ ಮುಗಿಬಿದ್ದರು. ಮಾಸ್ಕ್ ಧರಿಸದೇ ಇರುವುದೂ ಕಂಡು ಬಂತು.
ಮಾರುಕಟ್ಟೆಯಲ್ಲಿ ಜನಸಂದಣಿ
ಜಿಲ್ಲೆಯಲ್ಲಿ 72 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಾಕಷ್ಟು ಬಾರಿ ಪೊಲೀಸರು ಹೇಳಿದ್ದರೂ ಜನ ಮಾತ್ರ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂಬುದಕ್ಕೆ ಸಾಕ್ಷಿ ಈ ಮಾರುಕಟ್ಟೆಯಲ್ಲಿನ ಜನಸಂದಣಿ.