ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ಭದ್ರಕೋಟೆ ಕಟ್ಟಲು ಪಕ್ಷದ ನಾಯಕರು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲೇ ನಿನ್ನೆ ನಗರದಲ್ಲಿ ಕಾರ್ಯಕಾರಿಣಿ ನಡೆಯಿತು. ಆದರೆ, ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಎಡವಟ್ಟು ಆಗಿದೆ ಎನ್ನಲಾಗಿದೆ. ಈ ಸಂಬಂಧದ ಫೋಟೋವೊಂದು ವೈರಲ್ ಕೂಡಾ ಆಗಿದೆ.
ಭಾರತಾಂಬೆಯ ಪೋಸ್ಟರ್ನಲ್ಲಿ ಪಾಕ್ ಧ್ವಜ ಇರುವ ಫೋಟೋ ವೈರಲ್! - ಭಾರತಾಂಭೆ ಚಿತ್ರದಲ್ಲಿ ಪಾಕ್ ಧ್ವಜ
ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಹಾಕಿದ್ದ ಭಾರತಾಂಬೆಯ ಚಿತ್ರದಲ್ಲಿ ಪಾಕ್ ಧ್ವಜ ಕಾಣಿಸಿಕೊಂಡಿದೆ ಎಂಬ ಫೋಟೋ ವೈರಲ್ ಆಗಿದೆ.
ಪಾಕ್ ಧ್ವಜ ಇರುವ ಫೋಟೋ ವೈರಲ್!
ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಎಲ್ಲರಿಗೂ ಗೌರವ ಸೂಚಕವಾಗಿ ಹಾಕಿದ್ದ ಭಾರತಾಂಬೆಯ ಚಿತ್ರದಲ್ಲಿ ಪಾಕಿಸ್ತಾನದ ಧ್ವಜ ಕಾಣಿಸಿದೆ ಎಂಬ ಮಾತು ಕೇಳಿ ಬಂದಿದೆ. ಭಾರತಾಂಬೆಯ ಪೋಸ್ಟರ್ನಲ್ಲಿ ಪಾಕಿಸ್ತಾನದ ಚಿತ್ರ ಇರುವ ಫೋಟೋ ವೈರಲ್ ಆಗುತ್ತಿದೆ.
ಇದನ್ನೂ ಓದಿ:ದಾಯಾದಿಗಳ ಕಿರುಕುಳದಿಂದ ಬೇಸತ್ತ ವೃದ್ಧೆಯಿಂದ ದಯಾಮರಣಕ್ಕೆ ಅರ್ಜಿ
Last Updated : Dec 29, 2021, 8:03 PM IST