ಬೆಳಗಾವಿ: ಅಕ್ರಮವಾಗಿ ಮುಂಬೈನ ಕಾಳಸಂತೆಗೆ ತೆಗೆದುಕೊಂಡು ಹೋಗ್ತಿದ್ದ 240 ಕ್ಕೂ ಹೆಚ್ಚಿನ ಚೀಲಗಳ ಆರು ಟನ್ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್ ಮತ್ತು ವಾಹನ ಜಪ್ತಿ ಮಾಡಿಕೊಳ್ಳುವ ಮೂಲಕ ಬೈಲಹೊಂಗಲ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ ಘಟನೆ ನಡೆದಿದೆ.
ಅಕ್ರಮವಾಗಿ ಸಾಗಿಸುತ್ತಿದ್ದ ಆರು ಟನ್ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್ ಜಪ್ತಿ... - 240 ಕ್ಕೂ ಹೆಚ್ಚಿನ ಕ್ಷೀರಭಾಗ್ಯ ಹಾಲಿನ ಪೌಡರ್ ಜಪ್ತಿ
ಅಕ್ರಮವಾಗಿ ತೆಗೆದುಕೊಂಡು ಹೋಗ್ತಿದ್ದ 240 ಕ್ಕೂ ಹೆಚ್ಚಿನ ಚೀಲಗಳ ಆರು ಟನ್ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್ ಮತ್ತು ವಾಹನ ಜಪ್ತಿ ಮಾಡಿಕೊಳ್ಳುವ ಮೂಲಕ ಬೈಲಹೊಂಗಲ ಪೊಲೀಸರು ಭರ್ಜರಿ ಕಾರ್ಯಚರಣೆ ಮಾಡಿದ್ದಾರೆ.
![ಅಕ್ರಮವಾಗಿ ಸಾಗಿಸುತ್ತಿದ್ದ ಆರು ಟನ್ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್ ಜಪ್ತಿ... belagavi](https://etvbharatimages.akamaized.net/etvbharat/prod-images/768-512-9137201-32-9137201-1602418947471.jpg)
ಬೈಲಹೊಂಗಲ ತಾಲೂಕಿನ ಹೊಸ ಕುರಗುಂದ ಬಳಿ ಅಕ್ರಮವಾಗಿ ಮುಂಬೈನ ಕಾಳಸಂತೆಗೆ ತೆಗೆದುಕೊಂಡು ಹೋಗ್ತಿದ್ದ 25 ಕೆ.ಜಿ ತೂಕದ ಸುಮಾರು 240ಕ್ಕೂ ಹೆಚ್ಚು ಚೀಲಗಳ ಆರು ಟನ್ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್ ಸಾಗಿಸುತ್ತಿದ್ದ ಕ್ಯಾಂಟರ್ ವಾಹನ ಜಪ್ತಿ ಮಾಡಲಾಗಿದೆ.
ಪೊಲೀಸರು ಜಪ್ತಿ ಮಾಡಿಕೊಂಡಿರುವ ಕ್ಯಾಂಟರ್ ವಾಹನದಲ್ಲಿ ಕರ್ನಾಟಕ ಸರ್ಕಾರದ ಹೆಸರಿನ ನಂದಿನಿ ಮಿಲ್ಕ್ ಪೌಡರ್, ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್ ಚೀಲಗಳು ಪತ್ತೆಯಾಗಿದ್ದು. ಇವುಗಳನ್ನು ಅಕ್ರಮವಾಗಿ ಧಾರವಾಡದಿಂದ ಮುಂಬೈಗೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎನ್ನಲಾಗಿದೆ. ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.