ಅಥಣಿ:ಲಾಕ್ಡೌನ್ನಿಂದಾಗಿ ರೈತರ ಬೆಳೆ ಮೇಲೆ ಭಾರಿ ಹೊಡೆತ ಬಿದ್ದ ಪರಿಣಾಮ ಎಚ್ಚೆತ್ತ ರಾಜ್ಯ ಸರ್ಕಾರ, ಕೃಷಿ ಮಾರುಕಟ್ಟೆಗೆ ಮುಕ್ತ ಅವಕಾಶ ಕಲ್ಪಿಸಿದೆ.
ಅಥಣಿ: ಕೃಷಿ ಉತ್ಪನ್ನ ಮಾರಾಟಕ್ಕೆ ಅವಕಾಶ ಕೊಟ್ಟ ಸರ್ಕಾರ - ಅಥಣಿ: ಲಾಕ್ಡೌನ್ ಸಡಿಲಿಸಿ ಕೃಷಿ ಮಾರುಕಟ್ಟೆಗೆ ಅವಕಾಶ ಕೊಟ್ಟ ಸರ್ಕಾರ
ಅಥಣಿ ಪಟ್ಟಣ ಹಾಗೂ ಕೆಲವು ಗ್ರಾಮೀಣ ಭಾಗದಲ್ಲಿ ರೈತರು ಬೆಳೆದ ಬೆಳೆಗಳನ್ನು ವಾಹನದಲ್ಲಿ ತೆಗೆದುಕೊಂಡು ವ್ಯಾಪಾರ ವಹಿವಾಟು ನಡೆಸಿರುವ ದೃಶ್ಯ ಕಂಡುಬಂತು.
ಕಲ್ಲಂಗಡಿ ಮಾರಾಟ
ಕೃಷಿ ವಲಯಕ್ಕೆ ಸರ್ಕಾರ ಲಾಕ್ಡೌನ್ ಆದೇಶ ಸಡಿಲಿಸಿದ ಕಾರಣ ಇಂದು ಅಥಣಿಯಲ್ಲಿ ವಾಹನಗಳಲ್ಲಿ ರೈತರು ಹಣ್ಣು-ತರಕಾರಿ ಮಾರಾಟ ಮಾಡಿದರು. ಇಷ್ಟ ದಿನ ವಾಹನ ಸಂಚಾರಕ್ಕೆ ತಡೆ ನೀಡಿದ್ದ ಪರಿಣಾಮ ಹಲವು ತರಕಾರಿ ಬೆಳೆಗಳು ಜಮೀನಿನಲ್ಲೇ ಕೊಳೆತು ಹೋಗಿವೆ.