ಕರ್ನಾಟಕ

karnataka

ETV Bharat / city

ಆನ್‍ಲೈನ್ ಶಿಕ್ಷಣ: ಬೌದ್ಧಿಕಮಟ್ಟ ವೃದ್ಧಿಗಿಂತ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ! - ಆನ್​ಲೈನ್ ಕ್ಲಾಸ್​​

ಕೊರೊನಾ ಭಯಕ್ಕೆ ಸರ್ಕಾರ ಹಾಗೂ ಪೋಷಕರು ಆಫ್‍ಲೈನ್ ಬಿಟ್ಟು ಆನ್‍ಲೈನ್ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ಆದರೆ, ಆನ್‍ಲೈನ್ ಶಿಕ್ಷಣ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

Online Education
ಆನ್‍ಲೈನ್ ಶಿಕ್ಷಣ

By

Published : Jan 16, 2021, 8:48 PM IST

ಬೆಳಗಾವಿ:ಮಹಾಮಾರಿ ಕೊರೊನಾ ಅಟ್ಟಹಾಸದಿಂದ ಜಾರಿಗೆ ಬಂದಿರುವ ಆನ್‍ಲೈನ್ ಶಿಕ್ಷಣ ವ್ಯವಸ್ಥೆ, ಮಕ್ಕಳ ಬೌದ್ಧಿಕ ಮಟ್ಟ ಮತ್ತು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದೇಶಾದ್ಯಂತ ಕೊರೊನಾ ನಿಯಂತ್ರಣಕ್ಕೆ ಬರುತ್ತಿರುವ ಕಾರಣ, ಜನವರಿ 1ರಿಂದ ಪದವಿ, ದ್ವಿತೀಯ ಪಿಯು ಹಾಗೂ ಎಸ್ಎಸ್‍ಎಲ್‍ಸಿ ತರಗತಿಗಳನ್ನು ಸರ್ಕಾರ ಆರಂಭಿಸಿದೆ. ಉಳಿದಂತೆ ಎಲ್ಲಾ ತರಗತಿಗಳನ್ನು ಆನ್‍ಲೈನ್ ಮೂಲಕವೇ ನಡೆಸಲಾಗುತ್ತಿದೆ.

ಕೊರೊನಾ ಭಯಕ್ಕೆ ಸರ್ಕಾರ ಹಾಗೂ ಪೋಷಕರು ಆಫ್‍ಲೈನ್ ಬಿಟ್ಟು ಆನ್‍ಲೈನ್ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ಆದರೆ, ಆನ್‍ಲೈನ್ ಶಿಕ್ಷಣ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಲ್ಲದೆ, ಗ್ರಾಮೀಣ ಭಾಗದಲ್ಲಿ ನೆಟ್‍ವರ್ಕ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರವಾಗುತ್ತಿದ್ದಾರೆ.

ಇದನ್ನೂ ಓದಿ...ನಾಳೆ ಕುಂದಾನಗರಿಗೆ ಬಿಜೆಪಿ ಚಾಣಕ್ಯ; ಹೀಗಿದೆ ಅಮಿತ್ ಶಾ ಟೂರ್ ಪ್ಲಾನ್​

ಕಣ್ಣು ನೋವಿನ ಸಮಸ್ಯೆ:ಆನ್‍ಲೈನ್ ಶಿಕ್ಷಣ ಮೊಬೈಲ್ ಹಾಗೂ ಲ್ಯಾಪ್‍ಟಾಪ್ ಮೂಲಕ ಪಡೆಯಬೇಕಿರುವ ಕಾರಣ ಪ್ರೌಢ, ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳು ಕಣ್ಣು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ದಿನವಿಡೀ ಆನ್‍ಲೈನ್ ತರಗತಿ ನಡೆಸುತ್ತಿರುವ ಕಾರಣ, ವಿದ್ಯಾರ್ಥಿಗಳನ್ನು ಹೈರಾಣಾಗಿಸಿದೆ. ಅಲ್ಲದೆ, ಆಫ್‍ಲೈನ್ ತರಗತಿಯಂತೆ ಆನ್‍ಲೈನ್ ತರಗತಿಗಳು ಪರಿಣಾಮಕಾರಿಯಲ್ಲ ಎಂಬುದು ತಜ್ಞರ ಅಭಿಪ್ರಾಯ.

ಶಿಕ್ಷಣ ತಜ್ಞೆ ಡಾ‌. ಜ್ಯೋತಿ

ಕಲಿಕೆ ಬಿಟ್ಟು ಗೇಮ್‍ಗಳ ಗೀಳು:ಓದುವ ವಯಸ್ಸಿನಲ್ಲಿ ಮಕ್ಕಳ ಕೈಗೆ ಮೊಬೈಲ್ ಸಿಕ್ಕಿರುವುದು ಬೌದ್ಧಿಕ ಮಟ್ಟಕ್ಕಿಂತ ಕೆಟ್ಟ ಹವ್ಯಾಸಗಳಿಗೂ ಕಾರಣವಾಗುತ್ತಿದೆ. ತರಗತಿ ಪೂರ್ಣಗೊಳ್ಳುವವರೆಗೆ ಪೋಷಕರು ಮಕ್ಕಳ ಮುಂದೆ ಕೂರಲು ಆಗುವುದಿಲ್ಲ. ಹೀಗಾಗಿ, ಬೋರ್ ಹೊಡೆಯುವ ಆನ್‍ಲೈನ್ ತರಗತಿಗಳನ್ನು ಬಹುತೇಕ ವಿದ್ಯಾರ್ಥಿಗಳು ಸ್ಕಿಪ್ ಮಾಡುತ್ತಿದ್ದು, ಮೊಬೈಲ್ ಗೇಮ್‍ಗಳ ಗೀಳು ಹಚ್ಚಿಕೊಳ್ಳುತ್ತಿದ್ದಾರೆ. ಅಲ್ಲದೆ, ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಹೆಚ್ಚು ಮಾಡುತ್ತಿದ್ದು, ಓದಿನ ಕಡೆಗಿಂತ ಇನ್ನಿತರ ಚಟುವಟಿಕೆಗಳಲ್ಲೇ ನಿರತರಾಗಿದ್ದಾರೆ.

ಕಷ್ಟವಾಗುತ್ತಿದೆ ಆನ್‍ಲೈನ್ ಶಿಕ್ಷಣ!:ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆನ್‍ಲೈನ್ ಶಿಕ್ಷಣ ವ್ಯವಸ್ಥೆ ದಶಕಗಳ ಹಿಂದೆಯೇ ಜಾರಿಯಾಗಿದೆ. ಆದರೆ, ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ಆನ್‍ಲೈನ್ ಶಿಕ್ಷಣ ವ್ಯವಸ್ಥೆ ಹೊಸದು. ಪ್ರಾಯೋಗಿಕವಾಗಿ ನಡೆಸದೇ ದೇಶದಲ್ಲಿ ಏಕಾಏಕಿ ಆನ್‍ಲೈನ್ ಶಿಕ್ಷಣ ವ್ಯವಸ್ಥೆ ಜಾರಿಗೆ ತಂದಿದ್ದು, ಮಕ್ಕಳಿಗೆ ಹಾಗೂ ಪೋಷಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆನ್‍ಲೈನ್ ತರಗತಿಗಳಿಗೆ ಹಾಜರಾದರೂ ಕಷ್ಟ, ಗೈರಾದರೂ ಶಿಕ್ಷಣದ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇದೆ.

ಇನ್ನು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ನೆಟ್‍ವರ್ಕ್ ಸಮಸ್ಯೆಯಾಗುತ್ತಿದ್ದು, ಆನ್‍ಲೈನ್ ಪಾಠ ಕೇಳುವುದು ಕಷ್ಟವಾಗಿದೆ. ಬಡವರ್ಗದ ಮಕ್ಕಳಿಗೆ ಮೊಬೈಲ್, ಲ್ಯಾಪ್‍ಟಾಪ್ ಖರೀದಿಸುವುದು ಕಷ್ಟವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕಳೆದ ವರ್ಷ ಪ್ರವಾಹ ಹಾಗೂ ಅತಿವೃಷ್ಟಿಯಿಂದ ಬೆಳೆಗಳೆಲ್ಲವೂ ಹಾನಿಯಾಗಿದ್ದು, ರೈತರಿಗೆ ಒಂದು ಪೈಸೆ ಲಾಭವಾಗಿಲ್ಲ. ಬಡವರ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಗಗನಕುಸುಮವಾಗಿದೆ. ಆನ್‍ಲೈನ್ ಶಿಕ್ಷಣದ ಪರಿಣಾಮ ಕೆಲವರು ಶಿಕ್ಷಣ ಹಕ್ಕಿನಿಂದಲೂ ವಂಚಿತರಾಗುತ್ತಿದ್ದಾರೆ ಎಂದು ಶಿಕ್ಷಣ ತಜ್ಞರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ABOUT THE AUTHOR

...view details