ಕರ್ನಾಟಕ

karnataka

ETV Bharat / city

Gold Smuggling Case.. ಮತೋರ್ವ ಪೊಲೀಸ್ ಅಧಿಕಾರಿ ಪೇಚಿಗೆ, ಕಿರಣ್ ಮತ್ತೊಂದು ಕ್ರೈಂ ಬೆಳಕಿಗೆ - ಕಿರಣ್ ವೀರನಗೌಡರ ವಿರುದ್ಧ ಕ್ಯಾಂಪ್ ಠಾಣೆಯಲ್ಲಿ ಎಫ್ಐಆರ್

ಪೊಲೀಸರಿಂದಲೇ ಸ್ಮಗ್ಲಿಂಗ್ ಆಗುತ್ತಿತ್ತು ಎನ್ನಲಾದ ಚಿನ್ನ ಕಳ್ಳತನ ಪ್ರಕರಣದ ಪ್ರಮುಖ ಆರೋಪಿ ಕಿರಣ್ ವೀರನಗೌಡರ ಕ್ರೈಂ ಹಿಸ್ಟರಿ ಬಗೆದಷ್ಟು ಬಯಲಾಗ್ತಿದೆ. ಪೊಲೀಸ್ ಅಧಿಕಾರಿಗಳು ಹಾಗೂ ಆರೋಪಿಗಳ ಮಧ್ಯೆ ಮಿಡಿಯೇಟರ್ ಆಗಿ ಕೆಲಸ ಮಾಡಿದ್ದ ಈತನ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ.

Belgaum
ಸ್ಮಗ್ಲಿಂಗ್ ಚಿನ್ನ ಕಳ್ಳತನ ಪ್ರಕರಣದ ಆರೋಪಿ ಕಿರಣ್ ವೀರನಗೌಡರ

By

Published : Jul 3, 2021, 12:40 PM IST

ಬೆಳಗಾವಿ: ಪೊಲೀಸರ ಜೊತೆ ಸೇರಿ 4.9 ಕೆಜಿ ಸ್ಮಗ್ಲಿಂಗ್ ಚಿನ್ನ ಕಳ್ಳತನ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹುಬ್ಬಳ್ಳಿ ಮೂಲದ ಕಿರಣ್ ವೀರನಗೌಡರ ವಿರುದ್ಧ ಬೆಳಗಾವಿಯ ಕ್ಯಾಂಪ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

ನಿವೃತ್ತ ಡಿವೈಎಸ್​ಪಿ ಪುತ್ರನಾಗಿರುವ ಕಿರಣ್ ವೀರನಗೌಡರ ಕ್ರೈಂ ಹಿಸ್ಟರಿ ಬಗೆದಷ್ಟು ಬಯಲಾಗ್ತಿದೆ. ಪೊಲೀಸ್ ಅಧಿಕಾರಿಗಳು ಹಾಗೂ ಆರೋಪಿಗಳ ಮಧ್ಯೆ ಮಿಡಿಯೇಟರ್ ಆಗಿ ಕೆಲಸ ಮಾಡಿದ್ದ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ. ಓರ್ವ ಅಪರಿಚಿತ ಪೊಲೀಸ್ ಅಧಿಕಾರಿ ಹಾಗೂ ಕಿರಣ್ ವೀರನಗೌಡರ ವಿರುದ್ಧ ಕ್ಯಾಂಪ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಅಪರಿಚಿತ ಪೊಲೀಸ್ ಅಧಿಕಾರಿ ಎ1 ಆರೋಪಿಯಾದ್ರೆ, ಕಿರಣ್ ವೀರನಗೌಡರ ಎ2 ಆರೋಪಿಯಾಗಿದ್ದಾನೆ. ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ದಾಖಲಾದ ಪ್ರಕರಣವೊಂದರ ಆರೋಪಿ ನೆರವಿಗೆ ದಾವಿಸಿದ್ದ ಕಿರಣ್ ವಿರುದ್ಧ 10 ಲಕ್ಷ ಲಂಚ ಕೊಡಿಸಿದ ಆರೋಪ ಕೇಳಿ ಬಂದಿದೆ.

ಪೊಲೀಸರಿಂದ ತೊಂದರೆ ಆಗದಂತೆ ನೋಡಿಕೊಳ್ಳಲು ಲಂಚ ನೀಡಲಾಗಿದೆ. 2020ರ ನವೆಂಬರ್ ಮೊದಲ ವಾರದಲ್ಲಿ ಆರೋಪಿ ಕಡೆಯಿಂದ ಪೊಲೀಸ್ ಅಧಿಕಾರಿಗೆ 10 ಲಕ್ಷ ರೂ. ಲಂಚ ಕೊಡಿಸಿದ್ದಾನೆ ಎಂದು ಹೇಳಲಾಗ್ತಿದೆ. ಪೊಲೀಸರ ಜೊತೆ ಸೇರಿ ಸ್ಮಗ್ಲಿಂಗ್ ಚಿನ್ನ ಕದ್ದ ಆರೋಪದಡಿ ಸದ್ಯ ಕಿರಣ್ ಸಿಐಡಿ ವಶದಲ್ಲಿದ್ದಾರೆ.

ಇದನ್ನೂ ಓದಿ:Murder: ಬೆಂಗಳೂರಲ್ಲಿ ಕಿರುಕುಳ ತಾಳದೆ ಪತಿಯ ಹತ್ಯೆಗೆ ಪತ್ನಿಯೇ ಕೊಟ್ಟಳಾ ಸುಪಾರಿ?

ABOUT THE AUTHOR

...view details