ಕರ್ನಾಟಕ

karnataka

ಕೃಷ್ಣಾ ನದಿ ತೀರದ ಮರಳು ಅಡ್ಡೆಯ ಮೇಲೆ ದಾಳಿ: 92 ಬ್ರಾಸ್ ಮರಳು ವಶಕ್ಕೆ

By

Published : Jun 16, 2019, 7:57 AM IST

Updated : Jun 16, 2019, 9:33 AM IST

ಬೆಳಗಾವಿಯ ಗ್ರಾಮವೊಂದರಲ್ಲಿ ಕಂದಾಯ ಮತ್ತು ಪೊಲೀಸ್ ಇಲಾಖೆಯಿಂದ 92 ಬ್ರಾಸ್ ಅನಧಿಕೃತ ಮರಳನ್ನು ರೈಡ್ ಮಾಡಿ ವಶಪಡಿಸಿಕೊಂಡಿದ್ದಾರೆ.

ಚಿಕ್ಕೋಡಿ

ಚಿಕ್ಕೋಡಿ :ಬರಗಾಲದಿಂದ ಬತ್ತಿ ಹೋಗಿರುವ ಕೃಷ್ಣಾ ನದಿ ತೀರದಲ್ಲಿ ಒಡಲ ಕೊರೆದು, ಅಕ್ರಮವಾಗಿ ಮರಳು ಸಂಗ್ರಹಣೆ ಮಾಡುತ್ತಿದ್ದ ಅಡ್ಡೆಯ ಮೇಲೆ ಪೋಲಿಸರು ಏಕಾಏಕಿ ದಾಳಿ ನಡೆಸಿ ಮರಳು ವಶಪಡಿಸಿಕೊಂಡಿದ್ದಾರೆ.

ಜಿಲ್ಲೆಯ ಕಾಗವಾಡ ತಾಲೂಕಿನ ಬನಿಜವಾಡ ಗ್ರಾಮದಲ್ಲಿ ಅಕ್ರಮವಾಗಿ ಮಾಡುತಿದ್ದ ಮರಳು ಧಂದೆಯ ಕುರಿತು ಈಟಿವಿ ಭಾರತ ವರದಿ ಮಾಡಿತ್ತು. ವರದಿ ನೋಡಿ ಎಚೆತ್ತ ಅಧಿಕಾರಿಗಳು, ಜಿಲ್ಲೆಯ ಕಾಗವಾಡ ತಾಲೂಕಿನ ತಹಸೀಲ್ದಾರ ಪ್ರಮೀಳಾ ದೇಶಪಾಂಡೆ, ಗ್ರೇಡ್-2 ತಹಸೀಲ್ದಾರ ವಿಜಯ ಚೌಗುಲೆ, ಪಿಎಸ್‍ಐ ಹನಮಂತ ಶಿರಹಟ್ಟಿ ಅವರ ಸಿಬ್ಬಂದಿಯೊಂದಿಗೆ ಕೃಷ್ಣಾ ನದಿ ತೀರದ ಬನಿಜವಾಡ ಗ್ರಾಮದಲ್ಲಿ ಅಡ್ಡೆಯ ಮೆಲೆ ದಾಳಿ ನಡೆಸಿದ್ದಾರೆ.

92 ಬ್ರಾಸ್ ಮರಳು ವಶಕ್ಕೆ

ಈ ಗ್ರಾಮದಲ್ಲಿ ಜನರು ಮನೆ ಮುಂದೆ ಅನಧಿಕೃತವಾಗಿ ಮರಳನ್ನು ಸಂಗ್ರಹಿಸಿಟ್ಟದ್ದು, ಏಕ ಕಾಲಕ್ಕೆ ಅಧಿಕಾರಿಗಳು ಬನಿಜವಾಡ ಗ್ರಾಮಕ್ಕೆ ಧಾವಿಸಿ ಪ್ರತಿಯೊಬ್ಬರ ಮನೆಯಲ್ಲಿ ಸಂಗಹಿಸಿದ್ದ, 92 ಬ್ರಾಸ್ ಮರಳು ವಶಪಡಿಸಿಕೊಂಡಿದ್ದಾರೆ.

Last Updated : Jun 16, 2019, 9:33 AM IST

For All Latest Updates

TAGGED:

ABOUT THE AUTHOR

...view details