ಕರ್ನಾಟಕ

karnataka

ETV Bharat / city

ಹೊರಗಿನಿಂದ ಬರುವ ಜನರನ್ನು ಗ್ರಾಮದಲ್ಲಿ ಕ್ವಾರಂಟೈನ್​​ ಮಾಡದಂತೆ ಆಗ್ರಹಿಸಿ ಪ್ರತಿಭಟನೆ - no qurqntine in village strike local people

ಹೊರಗಿನಿಂದ ಬರುವ ಜನರಿಗೆ ಗ್ರಾಮದಲ್ಲಿ ಕ್ವಾರಂಟೈನ್ ಮಾಡದಂತೆ ಆಗ್ರಹಿಸಿ ಚಿಕ್ಕಬಾಗೇವಾಡಿಯ ಗ್ರಾಮಸ್ಥರು ಇಂದು ಪ್ರತಿಭಟನೆ ನಡೆಸಿದರು.

no qurqntine in village strike local people
ಗ್ರಾಮದಲ್ಲಿ ಹೋಂ ಕ್ವಾರಂಟೈನ್ ಮಾಡದಂತೆ ಆಗ್ರಹ, ಗ್ರಾಮಸ್ಥರಿಂದ ಪ್ರತಿಭಟನೆ..!

By

Published : May 13, 2020, 7:59 PM IST

ಬೈಲಹೊಂಗಲ: ಹೊರಗಡೆಯಿಂದ ಬರುವ ಜನರಿಗೆ ಗ್ರಾಮದಲ್ಲಿ ಕ್ವಾರಂಟೈನ್ ಮಾಡದಂತೆ ಆಗ್ರಹಿಸಿ ಗ್ರಾಮ ಪಂಚಾಯತ್ ಕಚೇರಿ ಎದುರು ಚಿಕ್ಕಬಾಗೇವಾಡಿಯ ಗ್ರಾಮಸ್ಥರು ಇಂದು ಪ್ರತಿಭಟನೆ ನಡೆಸಿದರು.

ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮ ಪಂಚಾಯತ್ ಕಚೇರಿ ಎದುರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಜನರು, ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಆಗಮಿಸುವವರಿಗೆ ಗ್ರಾಮದ ಶಾಲೆಯಲ್ಲಿ ಕ್ವಾರಂಟೈನ್ ಮಾಡದಂತೆ ಒತ್ತಾಯಿಸಿದರು. ಕೊರೊನಾ ಅಟ್ಟಹಾಸಕ್ಕೆ ಇಡೀ ವಿಶ್ವವೇ ನಲುಗಿ ಹೋಗಿದೆ.

ಇನ್ನು ದೇಶದ ವಿವಿಧೆಡೆಗಳಿಂದ ಆಗಮಿಸುತ್ತಿರೋ ಜನರನ್ನು ಈದೀಗ ನಮ್ಮ ಗ್ರಾಮದಲ್ಲಿಯೇ ಕ್ವಾರಂಟೈನ್ ಮಾಡುವುದರಿಂದ ಗ್ರಾಮಕ್ಕೆ ಕೊರೊನಾ ಹರಡಬಹುದೆಂಬ ಆತಂಕ ಗ್ರಾಮಸ್ಥರಲ್ಲಿ ಮೂಡಿದೆ. ಹೀಗಾಗಿ ಅವರನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

ಪಕ್ಕದಲ್ಲಿಯೇ ಅವಳಿ ಗ್ರಾಮವಿರುವ ಹಿರೇಬಾಗೇವಾಡಿಯಲ್ಲಿ ಕೊರೊನಾ ಮಹಾಮಾರಿ ಭೀಕರವಾಗಿ ಹಬ್ಬುತ್ತಿದ್ದು, ಇದುವರೆಗೂ ಅಲ್ಲಿ 49 ಪ್ರಕರಣ ದೃಢಪಟ್ಟಿವೆ. ಇದರಿಂದಾಗಿ ಚಿಕ್ಕಬಾಗೇವಾಡಿಯಲ್ಲಿ ಯಾವುದೇ ಕಾರಣಕ್ಕೂ ಯಾರನ್ನೂ ಸರ್ಕಾರಿ ಕ್ವಾರಂಟೈನ್ ಮಾಡದಂತೆ ಎಚ್ಚರಿಕೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details