ಕರ್ನಾಟಕ

karnataka

ETV Bharat / city

ಮರಳಿ ಊರಿಗೆ: ಮಹಾರಾಷ್ಟ್ರದ ಭಕ್ತರಿಗೆ ಈ ಬಾರಿ ಇಲ್ಲ ಮಾಯಕ್ಕನ ದರ್ಶನ ಭಾಗ್ಯ - no Mayakka darshan to Maharashtra Devotees

ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತವಾಗಿ ಮಹಾರಾಷ್ಟ್ರದ ಗಡಿಯಲ್ಲಿ ಕರ್ನಾಟಕ ಸರ್ಕಾರ ಚೆಕ್ ಪೊಸ್ಟ್‌ ನಿರ್ಮಿಸಿದ್ದು, ಕೊರೊನಾ ನೆಗೆಟಿವ್ ಇದ್ದವರಿಗೆ ಮಾತ್ರ ಕರ್ನಾಟಕ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.

ಊರಿಗೆ ಮರಳಿದ ಮಹಾರಾಷ್ಟ್ರದ ಭಕ್ತರು
ಊರಿಗೆ ಮರಳಿದ ಮಹಾರಾಷ್ಟ್ರದ ಭಕ್ತರು

By

Published : Mar 5, 2021, 1:49 PM IST

ಚಿಕ್ಕೋಡಿ: ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆಯಲ್ಲಿ ಒಂದಾದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕಾ ದೇವಿ ಜಾತ್ರೆಗೆ ಆಗಮಿಸಿದ ಮಹಾರಾಷ್ಟ್ರದ ಭಕ್ತರು ದೇವಿಯ ದರ್ಶನ ಪಡೆಯದೇ ತಮ್ಮ ಊರುಗಳಿಗೆ ಪ್ರಯಾಣಿಸುವಂತ ಪ್ರಸಂಗ ಎದುರಾಗಿದೆ.

ಊರಿಗೆ ಮರಳಿದ ಮಹಾರಾಷ್ಟ್ರದ ಭಕ್ತರು

ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತವಾಗಿ ಮಹಾರಾಷ್ಟ್ರದ ಗಡಿಯಲ್ಲಿ ಕರ್ನಾಟಕ ಸರ್ಕಾರ ಚೆಕ್ ಪೊಸ್ಟ್‌ ನಿರ್ಮಿಸಿದ್ದು, ಕೊರೊನಾ ನೆಗೆಟಿವ್ ಇದ್ದವರಿಗೆ ಮಾತ್ರ ಕರ್ನಾಟಕ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಈಗಾಗಲೇ ಮಹಾರಾಷ್ಟ್ರದ ಸಾಂಗಲಿ, ಸೊಲ್ಲಾಪುರ, ಲಾತೂರ, ಔರಂಗಾಬಾದ್​ ಜಿಲ್ಲೆಯಿಂದ ಜೋಡೆತ್ತಿನ ಮೂಲಕ ಜಾತ್ರೆಗೆ ಬರುತ್ತಿರುವ ಭಕ್ತರನ್ನು ಮಹಾರಾಷ್ಟ್ರದ ಗಡಿ ಬಳಿಯೇ ಮರಳಿ ತಮ್ಮ ಗ್ರಾಮಕ್ಕೆ ಕಳುಹಿಸಲಾಗುತ್ತಿದೆ‌.

ಇನ್ನು ಕೆಲ ಮಹಾರಾಷ್ಟ್ರದ ಭಕ್ತರು ಒಳ ಮಾರ್ಗಗಳಿಂದ ಕರ್ನಾಟಕ ಪ್ರವೇಶಿಸಿ, ಚಿಂಚಲಿ ಮಾಯಕ್ಕಾ ದೇವಿ ಜಾತ್ರೆಗೆ ಆಗಮಿಸುತ್ತಿದ್ದಾರೆ. ಆದರೆ, ಈ ಭಕ್ತರನ್ನು ಸಹ ಕಾಗವಾಡ ಹಾಗೂ ರಾಯಬಾಗ ತಾಲೂಕಿನ ಮಧ್ಯದಲ್ಲಿರುವ ಐನಾಪೂರ ರಸ್ತೆ ಬಳಿ ತಡೆ ಹಿಡಿದು ಅವರನ್ನು ಮರಳಿ ಊರಿಗೆ ಕಳುಹಿಸಲಾಗುತ್ತಿದೆ.

ಮಹಾರಾಷ್ಟ್ರ ಗಡಿಯಲ್ಲಿರುವ ಜತ್ತ, ಸಾಂಗೋಲಾ, ಫಂಡರಪುರ, ಬಾರ್ಸಿ, ಮಾಳಸೀರಸ, ಕವಟೆಮಹಾಂಕಾಳ, ತಾಸಗಾಂವ, ವಿಟಾ ತಾಲೂಕಿನ ವಿವಿಧ ಗ್ರಾಮಗಳಿಂದ ತಮ್ಮ ಹರಕೆ ಮುಟ್ಟಿಸಲು ಜೋಡೆತ್ತಿನ ಮೂಲಕ ಜಾತ್ರೆಗೆ ತೆರಳುತ್ತಿದ್ದರು. ಸುಮಾರು 30 ಲಕ್ಷಕ್ಕೂ ಅಧಿಕ ಭಕ್ತರು ಮಹಾರಾಷ್ಟ್ರ, ಗೋವಾ, ಕರ್ನಾಟಕ ತಮಿಳನಾಡು ಹೀಗೆ ವಿವಿಧ ರಾಜ್ಯಗಳಿಂದ ಆಗಮಿಸುತ್ತಿದ್ದರು. ಆದರೆ ಕಾಗವಾಡ, ಮಂಗಸೂಳಿ, ಬಳ್ಳಿಗೇರಿ, ಕೊಟ್ಟಲಗಿ ಸೇರಿದಂತೆ ಗಡಿ ಭಾಗದಲ್ಲಿ ಚೆಕ್​ಪೋಸ್ಟ್ ನಿರ್ಮಿಸಿದ ಪರಿಣಾಮದಿಂದಾಗಿ ಭಕ್ತರು ಮರಳಿ ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದಾರೆ.

ABOUT THE AUTHOR

...view details