ಚಿಕ್ಕೋಡಿ : ಕಳೆದ ಹತ್ತು ದಿನದಿಂದ ಸ್ವಯಂ ಘೋಷಿತ ಲಾಕ್‌ಡೌನ್‌ಗೊಳಗಾಗಿದ್ದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣ ನಾಳೆಯಿಂದ ಅನ್‌ಲಾಕ್ ಆಗಲಿದೆ.
ನಾಳೆಯಿಂದ ಚಿಕ್ಕೋಡಿ ಪಟ್ಟಣ ಅನ್‌ಲಾಕ್ - ಚಿಕ್ಕೋಡಿ ಲಾಕ್‌ಡೌನ್
ಗಡಿ ಭಾಗದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಕಳೆದ ಹತ್ತು ದಿನಗಳಿಂದ ಸ್ವಯಂ ಘೋಷಿತ ಲಾಕ್ಡೌನ್ಗೆ ಒಳಗಾಗಿದ್ದ ಚಿಕ್ಕೋಡಿ ಪಟ್ಟಣ ನಾಳೆಯಿಂದ ಲಾಕ್‌ಡೌನ್ ಮುಕ್ತವಾಗಲಿದೆ..
ಚಿಕ್ಕೋಡಿ ಲಾಕ್‌ಡೌನ್
ಸಾರ್ವಜನಿಕರು ಹಾಗೂ ರೈತರ ಮನವಿ ಮೇರೆಗೆ ಲಾಕ್‌ಡೌನ್ ತೆರವು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಸಾರ್ವಜನಿಕರು ಕೋವಿಡ್-19 ಸೋಂಕು ತಡೆಯಲು ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಟೈಸ್ ಬಳಕೆ ಮಾಡುವಂತೆ ಸಭೆಯಲ್ಲಿ ಸೂಚನೆ ನೀಡಲಾಗಿದೆ.