ಬೆಳಗಾವಿ: ಹೆಣ್ಣು ಮಗುವೆಂಬ ಕಾರಣಕ್ಕೆ ಹೆತ್ತವರೇ ನವಜಾತ ಶಿಶುವನ್ನು ಬೆಳಗಾವಿಯ ಜಿಲ್ಲಾಸ್ಪತ್ರೆ ಆವರಣದಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲಾಸ್ಪತ್ರೆ ಆವರಣದಲ್ಲಿ ನವಜಾತ ಶಿಶು ಪತ್ತೆ - ಹೆಣ್ಣು ಶಿಶು ರಕ್ಷಣೆಯ ಬಗ್ಗೆ ಮಾಹಿತಿ
ಹೆಣ್ಣು ಮಗುವೆಂಬ ಕಾರಣಕ್ಕೆ ಹೆತ್ತವರೇ ನವಜಾತ ಶಿಶುವನ್ನು ಬೆಳಗಾವಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ನಡೆದಿದೆ.

ನವಜಾತ ಶಿಶು ಪತ್ತೆ
ಆಸ್ಪತ್ರೆ ಮುಂಭಾಗದ ಕಟ್ಟೆಯ ಮೇಲೆ ನವಜಾತ ಹೆಣ್ಣು ಶಿಶುವನ್ನು ಚೀಲದಲ್ಲಿ ಹಾಕಿ ಬಿಟ್ಟು ಹೋಗಲಾಗಿದೆ. ಶಿಶು ಅಳುವ ಶಬ್ದವನ್ನು ಗಮನಿಸಿದ ಸ್ಥಳೀಯರು ಶಿಶುವನ್ನು ರಕ್ಷಣೆ ಮಾಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣು ಶಿಶುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಸ್ಥಳಕ್ಕೆ ಎಪಿಎಂಸಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕಿತ್ಸೆ ಬಳಿಕ ಮಕ್ಕಳ ಸಂರಕ್ಷಣಾ ಘಟಕಕ್ಕೆ ಮಗುವನ್ನು ರವಾನಿಸಲು ವೈದ್ಯರು ನಿರ್ಧರಿಸಿದ್ದಾರೆ.