ಕರ್ನಾಟಕ

karnataka

ETV Bharat / city

ಪ್ರವಾಹಕ್ಕೂ ಮುನ್ನವೇ ಚಿಕ್ಕೋಡಿಗೆ ಆಗಮಿಸಿದ ಎನ್‌ಡಿಆರ್‌ಎಫ್ ತಂಡ: ಕಾರಣ - krishna river flood

ಕೃಷ್ಣಾ ನದಿಯಲ್ಲಿ ಮತ್ತೆ ಪ್ರವಾಹ ಬರುವ ಮೂನ್ಸೂಚನೆ ಇರುವ ಕಾರಣ ಚಿಕ್ಕೋಡಿ ಪಟ್ಟಣಕ್ಕೆ ಎನ್‌ಡಿಆರ್‌ಎಫ್ ತಂಡ ಆಗಮಿಸಿದ್ದು, ನದಿ ತೀರದ ಪ್ರದೇಶಗಳನ್ನು ಅಧ್ಯಯನ ಮಾಡಲಿದೆ.

NDRF team arrive to chikkodi
ಎನ್‌ಡಿಆರ್‌ಎಫ್ ತಂಡ

By

Published : Jun 3, 2020, 7:51 PM IST

ಚಿಕ್ಕೋಡಿ: ಕೃಷ್ಣಾ ನದಿಯಲ್ಲಿ ಈ ಬಾರಿಯೂ ಪ್ರವಾಹ ಬರುವ ಮೂನ್ಸೂಚನೆ ಇರುವ ಕಾರಣ ಬೆಳಗಾವಿಯ ಚಿಕ್ಕೋಡಿ ಪಟ್ಟಣಕ್ಕೆ ಎನ್‌ಡಿಆರ್‌ಎಫ್ ತಂಡ ಆಗಮಿಸಿದೆ.

ಹೈದರಾಬಾದ್​​​​ನಿಂದ ಚಿಕ್ಕೋಡಿಗೆ 20 ಅಧಿಕಾರಿಗಳ ಎನ್​​​​ಡಿಆರ್​​​ಎಫ್ ತಂಡ ಬಂದಿದೆ. ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಬರುವ ಮುನ್ನವೇ ಈ ತಂಡ ಅಧ್ಯಯನ‌ ‌ನಡೆಸಲಿದೆ.

ಚಿಕ್ಕೋಡಿಗೆ ಆಗಮಿಸಿದ ಎನ್‌ಡಿಆರ್‌ಎಫ್ ತಂಡ

ಚಿಕ್ಕೋಡಿ ತಾಲೂಕಿನ ಯಡೂರು, ಇಂಗಳಿ‌ ಹಾಗೂ ಕಾಗವಾಡ ತಾಲೂಕಿನ ಜೂಗುಳ, ಮಂಗಾವತಿ ಸೇರಿದಂತೆ ನದಿ ತೀರದ ಪ್ರದೇಶಗಳನ್ನು ಪರಿಶೀಲನೆ ನಡೆಸಲಿದೆ. ಪ್ರವಾಹ ಬಂದರೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಅಧ್ಯಯನ ಮಾಡಲಿದೆ.

ABOUT THE AUTHOR

...view details