ಚಿಕ್ಕೋಡಿ(ಬೆಳಗಾವಿ): ಜಿಲ್ಲೆಯಾದ್ಯಂತ ಮಳೆ ಅಬ್ಬರಿಸುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಚಿಕ್ಕೋಡಿ ತಾಲೂಕಿನ ಜೈನಾಪುರ ಹತ್ತಿರದ ಸಂಕೇಶ್ವರ-ಚಿಕ್ಕೋಡಿ ರಸ್ತೆ ಬಳಿ ಕೆರೆ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ನೀರಿನ ರಭಸ ಲೆಕ್ಕಿಸದೆ ಮುನ್ನುಗ್ಗಿದ ಬೈಕ್ ಸವಾರ: ಚಿಕ್ಕೋಡಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿ ರಕ್ಷಣೆ - rain latest news
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜೈನಾಪುರ ಕೆರೆ ಭರ್ತಿಯಾಗಿದೆ. ಪರಿಣಾಮ ರಸ್ತೆ ಮೇಲೆ ಕೆರೆ ನೀರು ಹರಿಯುತ್ತಿದೆ. ಇದನ್ನು ಲೆಕ್ಕಿಸದೆ ಬೈಕ್ ಸವಾರನೊಬ್ಬ ರಭಸದ ನೀರಿನಲ್ಲೇ ತೆರಳಲು ಹೋಗಿ ಕೊಚ್ಚಿ ಹೋಗುತ್ತಿದ್ದನು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಆತನನ್ನು ರಕ್ಷಣೆ ಮಾಡಿದ್ದಾರೆ.
ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿ ರಕ್ಷಣೆ ಮಾಡಿದ ಸ್ಥಳೀಯರು
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜೈನಾಪುರ ಕೆರೆ ಭರ್ತಿಯಾಗಿದೆ. ನಿನ್ನೆ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಚಿಕ್ಕೋಡಿ-ಸಂಕೇಶ್ವರ ರಸ್ತೆಯ ಮೇಲೆ ಕೆರೆ ನೀರು ಹರಿಯುತ್ತಿದೆ. ಇದನ್ನು ಲೆಕ್ಕಿಸದೆ ಬೈಕ್ ಸವಾರನೊಬ್ಬ ರಭಸದ ನೀರಿನಲ್ಲೇ ತೆರಳಲು ಮುಂದಾಗಿ ಕೊಚ್ಚಿ ಹೋಗುತ್ತಿದ್ದನು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಆತನನ್ನು ರಕ್ಷಣೆ ಮಾಡಿದ್ದಾರೆ.
ಇನ್ನು ರಸ್ತೆಯ ಮೇಲೆ ನಾಲ್ಕೈದು ಅಡಿಯಷ್ಟು ನೀರು ಹರಿಯುತ್ತಿದ್ದ ಹಿನ್ನೆಲೆಯಲ್ಲಿ ಸಂಕೇಶ್ವರ-ಚಿಕ್ಕೋಡಿಯ ಪ್ರಮುಖ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ.