ಕರ್ನಾಟಕ

karnataka

ETV Bharat / city

ಬೆಳಗಾವಿ: ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ವ್ಯಕ್ತಿಯ ಕೊಲೆ - ಬೆಳಗಾವಿಯಲ್ಲಿ ವ್ಯಕ್ತಿಯ ಕೊಲೆ

ಚಿಲ್ಲರೆ ಹಣದ ವಿಷಯವಾಗಿ ಇಬ್ಬರ ನಡುವೆ ಜಗಳವಾಗಿದ್ದು ಉಸ್ಮಾನ್ ಲಾಲಸಾಬ ಶೇಖ್ ಎಂಬಾತ ಮಹ್ಮದ್ ದಿಲಾಪುಕಾರ ಶೇಖ್‌ನನ್ನು ಹತ್ಯೆ ಮಾಡಿದ್ದಾನೆ.

Murder of a man in Belagavi
ಬೆಳಗಾವಿಯಲ್ಲಿ ವ್ಯಕ್ತಿಯ ಕೊಲೆ

By

Published : Apr 17, 2022, 4:44 PM IST

ಬೆಳಗಾವಿ: ಕೇವಲ‌ 250 ರೂ. ಚಿಲ್ಲರೆ ಹಣದ ವಿಷಯವಾಗಿ ವ್ಯಕ್ತಿಯನ್ನು ಬಿಯರ್ ಬಾಟಲಿಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಬೆಳಗಾವಿ ವೈಭವ ನಗರದ ಸತ್ಯಸಾಯಿ ಕಾಲೋನಿಯಲ್ಲಿ ನಡೆದಿದೆ. ಮಹ್ಮದ್ ದಿಲಾಪುಕಾರ ಶೇಖ್ (27) ಕೊಲೆಗೀಡಾದ ವ್ಯಕ್ತಿ. ಉಸ್ಮಾನ್ ಲಾಲಸಾಬ ಶೇಖ್ ಆರೋಪಿ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದ್ಯ ತರಲು ಕೊಟ್ಟಿದ್ದ ಹಣದಲ್ಲಿ ಉಳಿದ ಚಿಲ್ಲರೆ ಹಣ ವಾಪಸ್ ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸತ್ಯಸಾಯಿ ಕಾಲೋನಿಯಲ್ಲಿ ಈ ಇಬ್ಬರೂ ನಿಂತುಕೊಂಡಿದ್ದರು. ಆಗ ಉಸ್ಮಾನ್ ಎಂಬಾತ ಮಹ್ಮದ್​ನಿಗೆ 500 ರೂ.‌ಹಣ ಕೊಟ್ಟು ಮದ್ಯ ತೆಗೆದುಕೊಂಡು ಬರುವಂತೆ ಹೇಳಿದ್ದಾನೆ.

ಇದನ್ನೂ ಓದಿ:ಮೂರು ದಿನದ ಮಳೆಗೆ ಬೆಚ್ಚಿಬಿದ್ದ ಮಹಾನಗರ : ಅಪಾಯದ ಸ್ಥಳಗಳನ್ನು ಗುರುತಿಸಿದ ಬಿಬಿಎಂಪಿ

ಮಹ್ಮದ್ 250 ರೂ.‌ಕೊಟ್ಟು ಮದ್ಯ ತಂದಿದ್ದಾನೆ.‌ ಉಳಿದ 250 ರೂ.‌ ಚಿಲ್ಲರೆ ಹಣವನ್ನು ಉಸ್ಮಾನ್​​ನಿಗೆ ಹಿಂದಿರುಗಿಸಿಲ್ಲ. ಈ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ನಂತರ ಉಸ್ಮಾನ್ ಬಿಯರ್ ಬಾಟಲಿಯಿಂದ ಮಹ್ಮದ್​​ ತಲೆಗೆ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details