ಕರ್ನಾಟಕ

karnataka

ETV Bharat / city

ಹೈನುಗಾರಿಕೆ ಪ್ರೋತ್ಸಾಹ ಧನ ಹೆಚ್ಚಿಸಿ: ಯು.ಟಿ ಖಾದರ್ - ಹೈನುಗಾರಿಕೆ ಬಗ್ಗೆ ಯು ಟಿ ಖಾದರ್ ಹೇಳಿಕೆ

ಹೈನುಗಾರಿಕೆ ಪ್ರಮಾಣ ಹೆಚ್ಚಳಕ್ಕೆ ಸರ್ಕಾರ ಪ್ರೋತ್ಸಾಹ ಧನ ಹೆಚ್ಚಿಸಬೇಕು. ಆಗ ಗೋವು ಸಾಕಣೆ ಪ್ರಮಾಣವೂ ಹೆಚ್ಚಾಗುತ್ತದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

mla ut khadar
ಶಾಸಕ ಯು ಟಿ ಖಾದರ್

By

Published : Dec 16, 2021, 6:23 PM IST

ಬೆಳಗಾವಿ: ಗೋವು ಸಂತತಿ ಹೆಚ್ಚಿಸಲು ರಾಜ್ಯ ಸರ್ಕಾರ ರೂಪಿಸಿರುವ ಯೋಜನೆಗಳೇನು ಎಂದು ಶಾಸಕ ಯು.ಟಿ. ಖಾದರ್ ವಿಧಾನಸಭೆಯಲ್ಲಿ ಪ್ರಶ್ನಿಸಿದರು.

ನಿಯಮ 69ರ ಅಡಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಹೈನುಗಾರಿಕೆ ಪ್ರಮಾಣ ಹೆಚ್ಚಳಕ್ಕೆ ಸರ್ಕಾರ ಪ್ರೋತ್ಸಾಹ ಧನ ಹೆಚ್ಚಿಸಬೇಕು. ಆಗ ಗೋವು ಸಾಕಣೆ ಪ್ರಮಾಣವೂ ಹೆಚ್ಚಾಗುತ್ತದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಶಾಸಕ ಯು ಟಿ ಖಾದರ್

ಜಿಲ್ಲೆಗೊಂದು ಗೋಶಾಲೆ ಸ್ಥಾಪನೆ ಬಗ್ಗೆ ಸರ್ಕಾರವೇ ಘೋಷಿಸಿದೆ. ಆದರೆ, ಯಾವ ಜಿಲ್ಲೆಯಲ್ಲೂ ಈವರೆಗೆ ಗೋ ಶಾಲೆ ಆರಂಭವಾಗಿಲ್ಲ. ಗೋವಾ ಗಡಿಯಲ್ಲಿ ಗೋಮಾಂಸ ರಫ್ತು ಕಂಪನಿಯ ಲೈಸೆನ್ಸ್ ರದ್ದಾಗಿಲ್ಲ. ಹೀಗಾಗಿ ಗೋಮಾಂಸ ಸಾಗಾಟ ಮಾಡಲು ಕಳ್ಳರಿಗೆ ಸುಲಭವಾಗಿದೆ. ಗಡಿಭಾಗದಲ್ಲಿರುವ ಗೋಮಾಂಸ ಕಂಪನಿಗಳ ಮಾಂಸಾ ಸಾಗಾಟ ಲೈಸೆನ್ಸ್ ಈವರೆಗೆ ರದ್ದು ಮಾಡಿಲ್ಲ ಏಕೆ? ತಕ್ಷಣವೇ ಅಂತಹ ಎಲ್ಲ ಲೈಸೆನ್ಸ್​​ಗಳನ್ನು ರದ್ದು ಮಾಡಬೇಕು.

ಸರ್ಕಾರಕ್ಕೆ ಗೋ ಶಾಲೆ ಆರಂಭಿಸಲು ಸಾಧ್ಯವಾಗದಿದ್ದರೆ ಖಾಸಗಿ ಗೋಶಾಲೆಗೆ ಹೆಚ್ಚುವರಿ ಹಣ ನೀಡಬೇಕು. ಕಾಂಗ್ರೆಸ್ ಸರ್ಕಾರ ಕೂಡ ಖಾಸಗಿ ಗೋಶಾಲೆಗೆ ಹಣ ನೀಡುತ್ತಿತ್ತು. ಹಾಲಿ ಸರ್ಕಾರ ಅರ್ಧದಷ್ಟು ಸಹಾಯ ಧನ ಕಡಿಮೆ ಮಾಡಿದೆ. ಹೀಗಾದರೆ ಗೋವು ಸಂತತಿ ಹೆಚ್ಚಾಗುವುದು ಹೇಗೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಹಂತ ಹಂತವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ: ಶಿಕ್ಷಣ ಸಚಿವ ಬಿ.ಸಿ ನಾಗೇಶ್

ABOUT THE AUTHOR

...view details