ಬೆಳಗಾವಿ :ಹೈಕಮಾಂಡ್ ಮನಸ್ಸು ಮಾಡಿದ್ರೆ ನಾನು ಮಂತ್ರಿಯಾಗುತ್ತೇನೆ. ಮಂತ್ರಿಸ್ಥಾನ ಸಿಕ್ಕರೆ ಒಳ್ಳೆ ಅಭಿವೃದ್ಧಿ ಕೆಲಸ ಮಾಡಿ ತೋರಿಸುತ್ತೇನೆ ಎಂದು ಹುಕ್ಕೇರಿ ಶಾಸಕ ಉಮೇಶ ಕತ್ತಿ ಹೇಳಿದರು.
ಪಕ್ಷದ ವರಿಷ್ಠರು ಮನಸ್ಸು ಮಾಡಿದ್ರೆ, ನಾನು ಮಂತ್ರಿಯಾಗಿ ರಾಜ್ಯದ ಸೇವೆ ಮಾಡುತ್ತೇನೆ : ಶಾಸಕ ಉಮೇಶ ಕತ್ತಿ ನಾಳೆ ಸಂಪುಟ ವಿಸ್ತರಣೆ ಹಿನ್ನೆಲೆ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕರೆ ಮೇರೆಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ಶಾಸಕ ಉಮೇಶ್ ಕತ್ತಿ ಬೆಂಗಳೂರಿಗೆ ಪ್ರಯಾಣ ಬೆಳಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದೂವರೆ ವರ್ಷದಲ್ಲಿ ಮೂರನೇ ಬಾರಿಗೆ ಸಂಪುಟ ವಿಸ್ತರಣೆ ಆಗ್ತಿದೆ.
ನಾಳೆ ಕಮಿಟಿ ಮೀಟಿಂಗ್ ಇದೆ. ಅದಕ್ಕಾಗಿ ನಿನ್ನೆ ರಾತ್ರಿ ಮುಖ್ಯಮಂತ್ರಿ ಕರೆ ಮಾಡಿ ಬೆಂಗಳೂರಿಗೆ ಬಾ ಅಂತಾ ಹೇಳಿದ್ದಾರೆ. ಹಾಗಾಗಿ, ಬೆಂಗಳೂರಿಗೆ ಹೋಗುತ್ತಿದ್ದೇನೆ. ಹೈಕಮಾಂಡ್ ಮತ್ತು ಪಕ್ಷದ ವರಿಷ್ಠರು ಮನಸ್ಸು ಮಾಡಿದ್ರೆ, ನಾನು ಮಂತ್ರಿಯಾಗಿ ರಾಜ್ಯದ ಸೇವೆ ಮಾಡುತ್ತೇನೆ ಎಂದರು.
ಇನ್ನು, ವಾರದಲ್ಲಿ ಎರಡ್ಮೂರು ಬಾರಿ ಸಿಎಂ ಕರೆ ಮಾಡ್ತಾರೆ. ಏನು ಮಾತಾಡಿದ್ದಾರೆ ಅಂತೆಲ್ಲಾ ಹೇಳಲಿಕ್ಕೆ ಬರೋದಿಲ್ಲ. ಮಂತ್ರಿಸ್ಥಾನ ಸಿಕ್ಕರೆ ಒಳ್ಳೆ ಅಭಿವೃದ್ಧಿ ಕೆಲಸ ಮಾಡಿ ತೋರಿಸುತ್ತೇನೆ. ಎಂಟು ಬಾರಿ ಶಾಸಕನಾಗಿ ಮೂರು ಬಾರಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ, ಪಕ್ಷ ಯಾವುದೇ ಜವಾಬ್ದಾರಿ ನೀಡಿದ್ರೂ ನಿಭಾಯಿಸಲು ಸಿದ್ಧನಿದ್ದೇನೆ ಎಂದರು.