ಕರ್ನಾಟಕ

karnataka

ETV Bharat / city

ನೆರೆ ಪೀಡಿತ ಶೆಡ್ ನಿವಾಸಿಗಳನ್ನು ಭೇಟಿ ಮಾಡಿದ ಶಾಸಕ ಸತೀಶ್ ಜಾರಕಿಹೊಳಿ - ನೆರೆ ಪೀಡಿತ ಶೆಡ್ ನಿವಾಸಿಗಳನ್ನು ಭೇಟಿ ಮಾಡಿದ ಸತೀಶ್ ಜಾರಕಿಹೊಳಿ

ಬೆಳಗಾವಿ ಜಿಲ್ಲೆಯ ಗೋಕಾಕ್​ನಲ್ಲಿ ನೆರೆ ಸಂತ್ರಸ್ತರಿಗಾಗಿ ನಿರ್ಮಿಸಿದ ಶೆಡ್‍ಗಳ ಕೇಂದ್ರಗಳಿಗೆ ಮಾಜಿ ಸಚಿವ ಹಾಗೂ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಭೇಟಿ ನೀಡಿ, ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.

ನೆರೆ ಪೀಡಿತ ಶೆಡ್ ನಿವಾಸಿಗಳನ್ನು ಭೇಟಿ ಮಾಡಿದ ಶಾಸಕ ಸತೀಶ್ ಜಾರಕಿಹೊಳಿ

By

Published : Oct 24, 2019, 5:03 PM IST

ಗೋಕಾಕ್​​:ನೆರೆ ಪೀಡಿತರಿಗಾಗಿ ನಗರದ ಕಡಬಗಟ್ಟಿ ಬಳಿ ಅರಣ್ಯ ಇಲಾಖೆಯ ಭೂಮಿಯಲ್ಲಿ ನಿರ್ಮಿಸಿದ ಶೆಡ್‍ಗಳ ಕೇಂದ್ರಗಳಿಗೆ ಮಾಜಿ ಸಚಿವ ಹಾಗೂ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಭೇಟಿ ನೀಡಿ ಸಂತ್ರಸ್ತರ ಕುಂದುಕೊರತೆಗಳನ್ನು ಆಲಿಸಿದರು.

ನೆರೆ ಪೀಡಿತ ಶೆಡ್ ನಿವಾಸಿಗಳನ್ನು ಭೇಟಿ ಮಾಡಿದ ಶಾಸಕ ಸತೀಶ್ ಜಾರಕಿಹೊಳಿ

ಈ ವೇಳೆ ಶೆಡ್‍ ನಿವಾಸಿಗಳು, ಇಲ್ಲಿ ನಿರ್ಮಿಸಲಾದ ಸ್ನಾನ ಗೃಹಗಳಿಗೆ ಬಾಗಿಲುಗಳೇ ಇಲ್ಲ, ಇದರಿಂದ ಮಹಿಳೆಯರಿಗೆ ಸಾಕಷ್ಟು ತೊಂದರೆ ಉಂಟಾಗಿದೆ. ವಿದ್ಯುತ್ ಸೌಲಭ್ಯ ಸರಿಯಾಗಿಲ್ಲ, ಕುಡಿಯಲು ನೀರು ಸಿಗುತ್ತಿಲ್ಲ ಎಂದು ಶಾಸಕರ ಬಳಿ ತಮ್ಮ ನೋವು ತೋಡಿಕೊಂಡರು.

ನಿವಾಸಿಗಳ ತೊಂದರೆ ಮನಗಂಡ ಸತೀಶ್ ಜಾರಕಿಹೊಳಿ, ತಮ್ಮ ಸ್ವಂತ ಖರ್ಚಿನಲ್ಲಿಯೆ ಶೆಡ್‌ಗಳಿಗೆ ಬಾಗಿಲು ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ಹೇಳಿದರು. ಇದೇ ವೇಳೆ, ನಿವಾಸಿಗಳಿಗೆ ದಿನಬಳಕೆಯ ವಸ್ತುಗಳ ಕಿಟ್​​ಗಳನ್ನು ವಿತರಿಸಿದರು.

ನೆರೆ ಪೀಡಿತ ಶೆಡ್ ನಿವಾಸಿಗಳ ಜೀವನ ನರಕ ಎಂದು ಈಟಿವಿ ಭಾರತ, ಅ.18 ರಂದು ವರದಿ ಮಾಡಿತ್ತು.

For All Latest Updates

TAGGED:

ABOUT THE AUTHOR

...view details