ಕರ್ನಾಟಕ

karnataka

ETV Bharat / city

ಪಾದಯಾತ್ರೆ ನಡೆಸಿ ಹರಕೆ ತೀರಿಸಿದ ರಮೇಶ ಜಾರಕಿಹೊಳಿ ಅಭಿಮಾನಿಗಳು - ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ರಮೇಶ್ ಜಾರಕಿಹೊಳಿ

ಉಪಚುನಾವಣೆಯಲ್ಲಿ ರಮೇಶ್​ ಜಾರಕಿಹೊಳಿ ಗೆಲುವು ಸಾಧಿಸಿದ ಕಾರಣ ಅಭಿಮಾನಗಳು ಪಾದಯಾತ್ರೆ ನಡೆಸಿ ತಮ್ಮ ಹರಿಕೆ ತೀರಿಸಿದ್ದಾರೆ.

MLA Ramesh jarakiholi padayatra
ಪಾದಯಾತ್ರೆ ನಡೆಸಿದ ರಮೇಶ ಜಾರಕಿಹೊಳಿ ಅಭಿಮಾನಿಗಳು

By

Published : Dec 16, 2019, 5:07 PM IST

ಚಿಕ್ಕೋಡಿ: ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಗೋಕಾಕ್​ ಕ್ಷೇತ್ರದ ಶಾಸಕ ರಮೇಶ್​ ಜಾರಕಿಹೊಳಿ ಅವರ ಕೊಣ್ಣೂರು ಪಟ್ಟಣದ ಅಭಿಮಾನಿಗಳು ಕೊಣ್ಣೂರು ದುರ್ಗಾದೇವಿ ದೇವಸ್ಥಾನದಿಂದ ಮುಗಳಖೋಡ ಯಲ್ಲಾಲಿಂಗ ದೇವಸ್ಥಾನವರೆಗೆ ಪಾದಯಾತ್ರೆ ನಡೆಸಿ ಹರಕೆ ತೀರಿಸಿದ್ದಾರೆ.

ಪಾದಯಾತ್ರೆ ನಡೆಸಿದ ರಮೇಶ ಜಾರಕಿಹೊಳಿ ಅಭಿಮಾನಿಗಳು

ಉಪಚುನಾವಣೆಯಲ್ಲಿ ಗೋಕಾಕ್​ ಮತ ಕ್ಷೇತ್ರದಿಂದ ರಮೇಶ್​ ಜಾರಕಿಹೊಳಿ ಗೆದ್ದರೆ ಪಾದಯಾತ್ರೆ ನಡೆಸುವುದಾಗಿ ಅಭಿಮಾನಿಗಳು ಹರಕೆ ಕಟ್ಟಿಕೊಂಡಿದ್ದರು. ಅದೇ ರೀತಿಯಾಗಿ ಇಂದು ಕೊಣ್ಣೂರ ಪಟ್ಟಣದ ಅಭಿಮಾನಗಳು ಪಾದಯಾತ್ರೆ ನಡೆಸಿ ತಮ್ಮ ಹರಿಕೆ ತೀರಿಸಿದ್ದಾರೆ.

ABOUT THE AUTHOR

...view details