ಬೆಳಗಾವಿ: ಸವದತ್ತಿ ಬಳಿ ಮಾಜಿ ಸಚಿವ, ಶಾಸಕ ಮುರುಗೇಶ್ ನಿರಾಣಿಯವರ ಕಾರು ಅಪಘಾತವಾಗಿದ್ದು, ಅವರ ಆಪ್ತ ಸಹಾಯಕ ಬಸವರಾಜ ಬಾಗಿ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸವದತ್ತಿ ಬಳಿ ಶಾಸಕ ಮುರುಗೇಶ್ ನಿರಾಣಿಯ ಕಾರು ಅಪಘಾತ - undefined
ಸವದತ್ತಿ-ಧಾರವಾಡ ಮಾರ್ಗ ಮಧ್ಯೆ ಶಾಸಕ ಮುರುಗೇಶ್ ನಿರಾಣಿಯವರ ಕಾರು ಅಪಘಾತವಾಗಿದ್ದು, ಗಾಯಗೊಂಡ ಶಾಸಕರ ಆಪ್ತ ಕಾರ್ಯದರ್ಶಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
![ಸವದತ್ತಿ ಬಳಿ ಶಾಸಕ ಮುರುಗೇಶ್ ನಿರಾಣಿಯ ಕಾರು ಅಪಘಾತ](https://etvbharatimages.akamaized.net/etvbharat/prod-images/768-512-3733785-thumbnail-3x2-megha.jpg)
ಶಾಸಕ ಮುರುಗೇಶ್ ನಿರಾಣಿಯ ಕಾರು ಅಪಘಾತ
ಜಿಲ್ಲೆಯ ಸವದತ್ತಿಯ ತಾಲೂಕು ಪಂಚಾಯತಿ ಬಳಿ ಮುರುಗೇಶ್ ನಿರಾಣಿಯ ಕಾರು, ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸವದತ್ತಿ-ಧಾರವಾಡ ಮಾರ್ಗ ಮಧ್ಯೆ ಈ ಘಟನೆ ನಡೆದಿದ್ದು, ಗಾಯಗೊಂಡ ಶಾಸಕರ ಆಪ್ತ ಕಾರ್ಯದರ್ಶಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.