ಅಥಣಿ (ಬೆಳಗಾವಿ) :ನಾಳೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲೂರು ಗ್ರಾಮದಲ್ಲಿ ಪಂಚಮಸಾಲಿ ಸಮಾಜದ ಮೂರನೇ ಪೀಠ ಸ್ಥಾಪನೆ ಆಗುತ್ತಿದೆ. ಸಮಾಜಪರ ಪೀಠಗಳು ಇನ್ನಷ್ಟು ಒಳ್ಳೆಯ ಕಾರ್ಯವನ್ನು ಮಾಡಲಿ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು.
ಅಥಣಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಧರ್ಮ ಗುರುಗಳು ಹಾಗೂ ಪೀಠಗಳು ಸ್ಥಾಪನೆ ಆದರೆ ಸಮಾಜ ಸುಧಾರಣೆ ಆಗುತ್ತದೆ. ಪಂಚಮಸಾಲಿ ಮೂರನೇ ಪೀಠ ಸ್ಥಾಪನೆಗೆ ಸಹಮತ ಇದೆ. ಎಲ್ಲಾ ಪೀಠಗಳಿಗೂ ನಾನು ಸಮಾನವಾಗಿ ಗೌರವಿಸುತ್ತೇನೆ ಎಂದರು.
ಪಂಚಮಸಾಲಿ ಸಮಾಜದಲ್ಲಿ ಮೊದಲೇ ಪೀಠ ಸ್ಥಾಪನೆಗೆ ಪರ-ವಿರೋಧದ ಮಾತುಗಳು ಕೇಳಿ ಬರುತ್ತಿದ್ದವು. ಆದರೆ, ಸದ್ಯ ಸಮಾಜದಲ್ಲಿ ಎರಡು ಪೀಠಗಳು ಸ್ಥಾಪನೆಯಾಗಿವೆ. ಇದರೊಂದಿಗೆ ಮತ್ತೆ ಮೂರನೇ ಪೀಠ ಸ್ಥಾಪನೆ ಆಗುತ್ತಿದೆ. ಇನ್ನು ಐದು ಪೀಠಗಳು ಸ್ಥಾಪನೆ ಆಗಲಿದ್ದಾವೆ ಎಂಬ ಮಾತುಗಳು ಕೇಳಿ ಬರುತ್ತಿವೆ ಎಂದು ಅಚ್ಚರಿಯ ಹೇಳಿಕೆ ನೀಡಿದರು.