ಬೆಳಗಾವಿ:ವಿಧಾನಪರಿಷತ್ ಚುನಾವಣಾ ಹೋರಾಟದಲ್ಲಿ ರಾಜಕೀಯ ಬದ್ಧ ವೈರಿಗಳ ವಾಗ್ಯುದ್ಧ ಜೋರಾಗಿಯೇ ನಡೆಯುತ್ತಿದೆ. ಇದೀಗ ರಮೇಶ್ ಜಾರಕಿಹೊಳಿ ಒಬ್ಬ ಬಂಡುಕೋರ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ರಾಯಬಾಗ ತಾಲೂಕಿನ ಹಂದಿಗುಂದದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಶಾಸಕಿ, ಮೂವರಲ್ಲಿ ಎಲೆಕ್ಷನ್ ನಾವು ಗೆಲ್ಲಬೇಕು, ನಾವು ಗೆಲ್ಲಬೇಕು ಅಂತಾ ಓಡಾಡ್ತಿದ್ದೀವಿ. ಆದ್ರೆ, ಒಬ್ಬರು ಬಿಜೆಪಿಯಿಂದ ಓಡಾಡ್ತಿದ್ರೆ, ನಾವು ಕಾಂಗ್ರೆಸ್‌ನಿಂದ ಓಡಾಡ್ತಿದೀವಿ. ಒಬ್ಬರು ಪಕ್ಷೇತರವಾಗಿ ಓಡಾಡ್ತಿದ್ದಾರೆ. ಅವರು ಮುಂಚೆ ನಮ್ಮ ಪಕ್ಷದಲ್ಲಿದ್ರು. ಇಲ್ಲಿಯೂ ಬಂಡುಕೋರತನ ಮಾಡಿದ್ರು. ಇಲ್ಲಿಯೂ ಕೂಡ ಅವರಿಗೆ ಸಮಾಧಾನ ಆಗಲಿಲ್ಲ. ಈಗ ಬಿಜೆಪಿಗೆ ಹೋಗಿದ್ದು, ಅಲ್ಲಿಯೂ ಬಂಡುಕೋರತನ ಮಾಡ್ತಿದ್ದಾರೆ ಎಂದು ಹರಿಹಾಯ್ದರು.