ಕರ್ನಾಟಕ

karnataka

ETV Bharat / city

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿಗೆ ಶಾಸಕ ಅಭಯ ಪಾಟೀಲ ಕ್ಷೀರಾಭಿಷೇಕ - ಬೆಳಗಾವಿಯಲ್ಲಿ ಶಾಸಕ ಅಭಯ ಪಾಟೀಲ

ಇಲ್ಲಿನ ಅನಗೋಲದಲ್ಲಿ ರಾಯಣ್ಣ ಪುತ್ಥಳಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದ ಘಟನೆ ಖಂಡಿಸಿದ ಅವರು, ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ..

MLA abhaya patila pouring milk on Rayanna statue
ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯ ಬಳಿಯ ರಾಯಣ್ಣ ಪುತ್ಥಳಿಗೆ ಶಾಸಕ ಅಭಯ ಪಾಟೀಲ ಕ್ಷೀರಾಭಿಷೇಕ

By

Published : Dec 18, 2021, 2:51 PM IST

ಬೆಳಗಾವಿ : ಶಾಸಕ ಅಭಯ ಪಾಟೀಲ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಕ್ಷೀರಾಭಿಷೇಕ ಮಾಡಿ ಗೌರವ ನಮನ ಸಲ್ಲಿಸಿದರು.

ಬೆಳಗಾವಿಯ ಡಿಸಿ ಕಚೇರಿ ಆವರಣಕ್ಕೆ ಆಗಮಿಸಿದ ಶಾಸಕರು ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ತೊಳೆದು ನಂತರ ಕ್ಷೀರಾಭಿಷೇಕ ಮಾಡಿದರು. ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಇಲ್ಲಿನ ಅನಗೋಲದಲ್ಲಿ ರಾಯಣ್ಣ ಪುತ್ಥಳಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದ ಘಟನೆ ಖಂಡಿಸಿದ ಅವರು, ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇದಕ್ಕೂ ಮುನ್ನ ಶಿವಾಜಿ ಉದ್ಯಾನವನದಲ್ಲಿರುವ ಛತ್ರಪತಿ ಶಿವಾಜಿ ಪುತ್ಥಳಿಗೂ ಶಾಸಕ ಅಭಯ ಪಾಟೀಲ್ ಮಾಲಾರ್ಪಣೆ ಮಾಡಿದ್ದರು.

ಇದನ್ನೂ ಓದಿ:ಬೆಳಗಾವಿ ಗಲಭೆ: 27 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ABOUT THE AUTHOR

...view details