ಕರ್ನಾಟಕ

karnataka

ETV Bharat / city

ಸಿಎಂ ಭೇಟಿ ಮಾಡಿದ ಸಚಿವ ಉಮೇಶ್ ಕತ್ತಿ - ಸವದಿ ನೇತೃತ್ವದ ನಿಯೋಗ: ಗರಿಗೆದರಿದ ಬಣ ರಾಜಕೀಯ

ಸಚಿವ ಉಮೇಶ್ ಕತ್ತಿ ಹಾಗೂ ಬಿಜೆಪಿ ಉಪಾಧ್ಯಕ್ಷ ಲಕ್ಷ್ಮಣ ಸವದಿ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿದೆ.

Umesh Katti, Laxman Savadi delegation meets CM Bommai
ಸಚಿವ ಉಮೇಶ್ ಕತ್ತಿ- ಸವದಿ ನೇತೃತ್ವದ ನಿಯೋಗ ಸಿಎಂ ಭೇಟಿ

By

Published : Jan 29, 2022, 1:48 PM IST

ಬೆಳಗಾವಿ: ಬೆಂಗಳೂರು ನಂತರ ಅತಿ ಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿ ಬಣ ರಾಜಕೀಯ ಗರಿಗೆದರಿದೆ.
ಸಚಿವ ಉಮೇಶ್ ಕತ್ತಿ ಹಾಗೂ ಬಿಜೆಪಿ ಉಪಾಧ್ಯಕ್ಷ ಲಕ್ಷ್ಮಣ ಸವದಿ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಒಂದು ಗಂಟೆಗಳ ಸುದೀರ್ಘ ಚರ್ಚೆ ನಡೆಸಿದೆ.

ಸಚಿವ ಉಮೇಶ್ ಕತ್ತಿ ಹಾಗೂ ಲಕ್ಷ್ಮಣ ಸವದಿ ನಿಯೋಗದಲ್ಲಿ 9 ಜನ ಜಿಲ್ಲೆಯ ನಾಯಕರು ಉಪಸ್ಥಿತರಿದ್ದರು. ಸಚಿವ ಉಮೇಶ್ ಕತ್ತಿ, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿಗೆ ಶಾಸಕರಾದ ಪಿ.ರಾಜೀವ್, ಅಭಯ್ ಪಾಟೀಲ್, ಮಹಾದೇವಪ್ಪ ಯಾದವಾಡ, ದುರ್ಯೋಧನ ಐಹೊಳೆ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ ಸಾಥ್​ ನೀಡಿದ್ದರು.

ಇದನ್ನೂ ಓದಿ: ಕಾಂಗ್ರೆಸ್ ಜತೆ ಹೊಂದಾಣಿಕೆ ಎಂದು ಆರೋಪಿಸಿದರೆ ತಲೆ, ಕೈಕಾಲು ತೆಗೆಯುತ್ತೇನೆ: ರವಿನಾರಾಯಣರೆಡ್ಡಿ ಖಡಕ್ ವಾರ್ನಿಂಗ್​​

ಉಮೇಶ್ ಕತ್ತಿ ನಿವಾಸದಲ್ಲಿ ನಡೆದಿದ್ದ ಸಭೆಯಲ್ಲಿ ಶಾಸಕ ಅನಿಲ್ ಬೆನಕೆ ಹಾಗೂ ಆನಂದ ಮಾಮನಿ ಅನಾರೋಗ್ಯ ಕಾರಣಕ್ಕೆ ಸಿಎಂ ಭೇಟಿ ಆಗಲಿಲ್ಲ. ಲಕ್ಷ್ಮಣ್ ಸವದಿ ಆಪ್ತ ಶಾಸಕ ಮಹಾಂತೇಶ ದೊಡಗೌಡರ ಸಹ ಗೈರಾಗಿದ್ದರು. ಆದರೆ, ಜಾರಕಿಹೊಳಿ‌ ಸಹೋದರರ ಜೊತೆಗೆ ಗುರುತಿಸಿಕೊಂಡಿದ್ದ ಮಾಜಿ ಸಚಿವ ಶ್ರೀಮಂತ ಪಾಟೀಲ್ ತಡವಾಗಿ ಸಿಎಂ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಗಮನ ಸೆಳೆದರು.

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ABOUT THE AUTHOR

...view details