ಕರ್ನಾಟಕ

karnataka

ETV Bharat / city

ರಾಯಬಾಗದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದ ಸಚಿವ ಸುರೇಶ ಅಂಗಡಿ - ರಾಯಬಾಗದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಕ್ಷೀಸಿಸಿದ ಸಚಿವ ಸುರೇಶ ಅಂಗಡಿ

ಹಾರೂಗೇರಿಯಿಂದ ರಾಯಬಾಗಕ್ಕೆ ಹೋಗುವ ರೇಲ್ವೆ ಮೇಲ್ಸೇತುವೆ ಕಾಮಗಾರಿ ವಿಕ್ಷೀಸಿದ ಕೇಂದ್ರ ರೇಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ, ಜನವರಿ ತಿಂಗಳ ಒಳಗಾಗಿ ಸಂಪೂರ್ಣ ಕಾಮಗಾರಿಯನ್ನು ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Minister Suresh Angadi watched railway over bridge work in Raibag
ಸಚಿವ ಸುರೇಶ ಅಂಗಡಿ

By

Published : Dec 19, 2019, 6:14 AM IST

Updated : Dec 19, 2019, 7:43 AM IST

ಚಿಕ್ಕೋಡಿ: ರಾಯಬಾಗ ರೈಲ್ವೆ ನಿಲ್ದಾಣಕ್ಕೆ ವಿಶೇಷ ರೈಲಿನ ಮೂಲಕ ಭೇಟಿ ನೀಡಿದ ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ, ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ವೀಕ್ಷಿಸಿದರು.

ಹಾರೂಗೇರಿಯಿಂದ ರಾಯಬಾಗಕ್ಕೆ ಹೋಗುವ ರೇಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಜನವರಿ ತಿಂಗಳ ಒಳಗಾಗಿ ಸಂಪೂರ್ಣ ಮುಗಿಸಿ ಸಾರ್ವಜನಿಕರಿಗೆ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಹಾಗೂ ಕಬ್ಬಿನ ವಾಹನಗಳಿಗೆ ಪ್ರತ್ಯೇಕ ಕೆಳಸೇತುವೆಯನ್ನು ಮಾಡಿಸಲು ಅಧಿಕಾರಿಗಳಿಗೆ ಈ ವೇಳೆ ಸಚಿವರು ಸೂಚಿಸಿದರು.

ರಾಯಬಾಗ ಸುತ್ತಮುತ್ತಲೂ 12 ಸಕ್ಕರೆ ಕಾರ್ಖಾನೆಗಳಿದ್ದು, ರೈಲುಗಳ ಮುಖಾಂತರ ಸಕ್ಕರೆಯನ್ನು ಹೊರ ದೇಶಗಳಿಗೆ ಕಳುಹಿಸಲು ಸಕ್ಕರೆಯನ್ನು ಸಂಗ್ರಹಿಸಲು ಅತ್ಯಾಧುನಿಕ ಮಾದರಿಯ ಗೋದಾಮು ಕಟ್ಟಿಸಬೇಕೆಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್​ ಕೋರೆ ಸಚಿವರಿಗೆ ಮನವಿ ಸಲ್ಲಿಸಿದರು.

Last Updated : Dec 19, 2019, 7:43 AM IST

For All Latest Updates

TAGGED:

ABOUT THE AUTHOR

...view details