ಕರ್ನಾಟಕ

karnataka

ETV Bharat / city

ಮಂಡ್ಯದಲ್ಲಿ ಮತಪ್ರಮಾಣ ಕಡಿಮೆಯಾಗಿದ್ದು ದುರದೃಷ್ಟಕರ : ಸಚಿವ ಸುಧಾಕರ್ - ಚುನಾವಣೆ ಫಲಿತಾಂಶ ಬಗ್ಗೆ ಸುಧಾಕರ್​ ಹೇಳಿಕೆ

ಕೆಲವು ಕ್ಷೇತ್ರಗಳಲ್ಲಿ ಮತ ಪ್ರಮಾಣ ಕಡಿಮೆಯಾಗಿದೆ. ಈ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು..

minister sudhakar
ಸಚಿವ ಡಾ.ಕೆ. ಸುಧಾಕರ್

By

Published : Dec 15, 2021, 12:57 PM IST

ಬೆಳಗಾವಿ: ವಿಧಾನ ಪರಿಷತ್​ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿ ಮತ ಪ್ರಮಾಣ ಕಡಿಮೆಯಾಗಿರುವುದು ದುರದೃಷ್ಟಕರ. ಈ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡುತ್ತೇವೆ ಎಂದು ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಸ್ವಲ್ಪ ಅಂತರದಲ್ಲಿ ಸೋತಿದ್ದೇವೆ :ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಕೋಲಾರದಲ್ಲಿ ಬಿಜೆಪಿ ಹೆಚ್ಚು ಮತ ಪಡೆದಿದೆ. ಇನ್ನೂ 220 ಮತ ಪಡೆದಿದ್ರೆ ಗೆಲ್ಲುತ್ತಿದ್ದೆವು. ಗ್ರಾಮ ಪಂಚಾಯತ್‌ ಸದಸ್ಯರು ಹೆಚ್ಚು ಮತ ನೀಡಿದ್ದಾರೆ.

ಮುಂದೆ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇವೆ. ಆರು ವರ್ಷದಲ್ಲಿ ಶೇ.34ರಷ್ಟು ಮತ ಪಡೆದಿದ್ದೇವೆ. ನಮಗೆ ಮತ ಕಡಿಮೆಯಾಗಿದೆ. ಸ್ವಲ್ಪ ಅಂತರದಲ್ಲಿ ಸೋತಿದ್ದೇವೆ. 2023ರಲ್ಲಿ ಹೆಚ್ಚು ಸೀಟು ಗೆಲ್ಲುತ್ತೇವೆ. ಕೋಲಾರದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದರು.

ಚುನಾವಣೆ ಫಲಿತಾಂಶದ ಬಗ್ಗೆ ಸಚಿವ ಸುಧಾಕರ್​ ಮಾತನಾಡಿರುವುದು..

ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡು ಕ್ಷೇತ್ರದಲ್ಲೂ ಮತದಾರರು, ಕಾರ್ಯಕರ್ತರು ದೊಡ್ಡ ರೀತಿಯಲ್ಲಿ ಬೆಂಬಲ ಕೊಟ್ಟಿದ್ದಾರೆ. ಮುಂದೆ ಎರಡು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇವೆ. ಒಬ್ಬ ಶಾಸಕರಿದ್ದೇವೆ, ಮುಂದಿನ ದಿನಗಳಲ್ಲಿ ಕನಿಷ್ಠ 6- 7 ಸ್ಥಾನ ಗೆಲ್ಲುವ ಪ್ರಯತ್ನ ಮಾಡುತ್ತೇವೆ ಎಂದರು.

ಜನರು ಜಾಗೃತಿ ವಹಿಸಬೇಕು :ಒಮಿಕ್ರಾನ್ ಬಗ್ಗೆ ಸೋಮವಾರ ಸದನಕ್ಕೆ ಮಾಹಿತಿ ನೀಡುತ್ತೇನೆ. ಸದ್ಯ ರಾಜ್ಯದಲ್ಲಿ ಒಮಿಕ್ರಾನ್ ನಿಯಂತ್ರಣದಲ್ಲಿದೆ. ಆದ್ರೆ, ಬಹಳ ಬೇಗ ಹರಡುತ್ತದೆ ಎಂದು WHO ಮಾಹಿತಿ ನೀಡಿದೆ. ಲಸಿಕೆ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಹಾಕಬೇಕಿದೆ‌.

ಜನರು ಕೂಡ ಈ ಬಗ್ಗೆ ಗಮನಿಸಬೇಕು. ಏನಾದರೂ ಹೆಚ್ಚಾದ್ರೆ ಸರ್ಕಾರವನ್ನು ಸುಲಭವಾಗಿ ಬ್ಲೇಮ್​​ ಮಾಡ್ತೀರಾ. ಹೀಗಾಗಿ, ಯಾರನ್ನು ಹೊಣೆ ಮಾಡೋದು ಬೇಡ. ಜಾಗೃತಿಯಿಂದ ಇರಿ ಎಂದರು.

ಇದನ್ನೂ ಓದಿ:ಪಕ್ಷದ ಸೋಲು-ಗೆಲುವಿಗೆ ಕಾರ್ಯಕರ್ತರೇ ಕಾರಣ : ಸಚಿವ ಕೆ ಎಸ್ ಈಶ್ವರಪ್ಪ

ABOUT THE AUTHOR

...view details