ಚಿಕ್ಕೋಡಿ : ಪ್ರವಾಹ ಭೀತಿ ಎದುರಾಗದಂತೆ ದೇವರಲ್ಲಿ ಬೇಡಿಕೊಳ್ಳಲು ಕಿತ್ತೂರು ಗ್ರಾಮದ ಶ್ರೀ ಲಕ್ಷ್ಮಿ ದೇವರ ಮೊರೆ ಹೋದ ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ ದೇವಸ್ಥಾನದ ಹೊರಗೆ ಅಭಿಮಾನಿಯಿಂದ ಬೂಟು ಹಾಕಿಸಿಕೊಂಡ ಘಟನೆ ನಡೆದಿದ್ದು, ವಿವಾದ ಸೃಷ್ಟಿಸಿದೆ.
ಅಭಿಮಾನಿ ಕೈಯಿಂದ ಶೂ ಹಾಕಿಸಿಕೊಂಡ ಸಚಿವ 'ಶ್ರೀಮಂತ' ! - ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ್
ಕಾಗವಾಡ ತಾಲ್ಲೂಕಿನ ಕೃಷ್ಣಾ ಕಿತ್ತೂರ ಗ್ರಾಮದ ಶ್ರೀ ಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಚಿವರು, ಕಳೆದ ಬಾರಿಯಂತೆ ಪ್ರವಾಹ ಬಾರದಿರಲಿ ಎಂದು ದೇವರ ಮೊರೆ ಹೋದರು. ಇದೆ ಸಂದರ್ಭದಲ್ಲಿ, ಶ್ರೀಮಂತ ಪಾಟೀಲ್ ಅಭಿಮಾನಿ ಒಬ್ಬರಿಂದ ಕಾಲಿಗೆ ಶೂ ಹಾಕಿಸಿಕೊಂಡ ಪ್ರಸಂಗ ನಡೆದಿದ್ದು, ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ.
![ಅಭಿಮಾನಿ ಕೈಯಿಂದ ಶೂ ಹಾಕಿಸಿಕೊಂಡ ಸಚಿವ 'ಶ್ರೀಮಂತ' ! minister-shrimant-patil-wearing-shoes-from-fan](https://etvbharatimages.akamaized.net/etvbharat/prod-images/768-512-12201008-thumbnail-3x2-kdkdd.jpg)
ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ್
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಕೃಷ್ಣಾ ಕಿತ್ತೂರ ಗ್ರಾಮದ ಶ್ರೀ ಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಚಿವರು, ಕಳೆದ ಬಾರಿಯಂತೆ ಪ್ರವಾಹ ಬಾರದಿರಲಿ ಎಂದು ಬೇಡಿಕೊಂಡರು. ಇದೇ ಸಂದರ್ಭದಲ್ಲಿ, ಶ್ರೀಮಂತ ಪಾಟೀಲ ಅಭಿಮಾನಿಯೊಬ್ಬರಿಂದ ಕಾಲಿಗೆ ಶೂ ಹಾಕಿಸಿಕೊಂಡ ಪ್ರಸಂಗವೂ ನಡೆಯಿತು.
ಜನರ ಸಂಕಷ್ಟಕ್ಕೆ ಹೆಗಲು ಕೋಡಬೇಕಾದ ಜನ ಜನಪ್ರತಿನಿಧಿಯೊಬ್ಬರು ಸಾರ್ವಜನಿಕರ ಕೈಯಲ್ಲಿ ಬೂಟು ಹಾಕಿಸಿಕೊಂಡಿದ್ದು ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಶೂ ಹಾಕಿದ ವ್ಯಕ್ತಿ ಸಚಿವರ ಸೇವಕರಾಗಲಿ, ಆಪ್ತರಾಗಲಿ ಅಲ್ಲ ಎನ್ನುವುದು ಗಮನಿಸಬೇಕಾದ ಅಂಶ.
Last Updated : Jun 20, 2021, 4:46 PM IST