ಕರ್ನಾಟಕ

karnataka

ETV Bharat / city

ಮೋದಿ ಅವಧಿಯಲ್ಲೇ ಹೆಚ್ಚು ಗೋಮಾಂಸ ರಫ್ತು: ಸಚಿವ ಸತೀಶ್​ ಆರೋಪ - undefined

ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ಗೋಮಾಂಸ ಹೆಚ್ಚು ರಫ್ತಾಗಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಬೆಳಗಾವಿಯಲ್ಲಿ ಆರೋಪಿಸಿದ್ದಾರೆ

ಬೆಳಗಾವಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ

By

Published : Apr 13, 2019, 5:36 AM IST

ಬೆಳಗಾವಿ:ಪ್ರಧಾನಿ ನರೇಂದ್ರ ಮೋದಿ ಅವರ ಐದು ವರ್ಷಗಳ ಆಡಳಿತ ಅವಧಿಯಲ್ಲೇ ಗೋಮಾಂಸ ಅಧಿಕ ಪ್ರಮಾಣದಲ್ಲಿ ರಫ್ತಾಗಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಆರೋಪಿಸಿದರು.

ಬೆಳಗಾವಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ

ಗೋಕಾಕ ನಗರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ನೋಡಿ ಮತಹಾಕಿ ಎಂದು ಸಂಸದ ಸುರೇಶ ಅಂಗಡಿ ಹೇಳುತ್ತಾರೆ. ಇದರಿಂದ ಅಂಗಡಿ‌ ಸಾಧನೆ ಏನೂ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈ ಸಲ ಸಂಸದ ಅಂಗಡಿ ಗೆದ್ದು ಬರಲು ಯಾವುದೇ ಅಲೆಯಿಲ್ಲ ಎಂದು ವ್ಯಂಗ್ಯವಾಡಿದರು.

ಜಾತಿ, ಧರ್ಮದ ಹೆಸರಲ್ಲಿ ಬಿಜೆಪಿಯವರು ಮತ ಕೇಳುತ್ತಾರೆ. ಮೋದಿ ಭರವಸೆ ನೀಡಿದ್ದಂತೆ ಅವರ ಸರ್ಕಾರದ ಅವಧಿಯಲ್ಲಿ ಕಪ್ಪು ಹಣ, ಬುಲೆಟ್ ಟ್ರೈನ್ ಬರಲೇ ಇಲ್ಲ. ಹೀಗಾಗಿ ಸುಳ್ಳು ಹೇಳುವ ಪ್ರಧಾನಿ ನಮಗೆ ಮತ್ತೊಮ್ಮೆ ಬೇಕಿಲ್ಲ. ಮೋದಿ‌ ಹೆಸರಿನಿಂದ ಬಡವರ ಹೊಟ್ಟೆ ತುಂಬಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

For All Latest Updates

TAGGED:

ABOUT THE AUTHOR

...view details