ಬೆಳಗಾವಿ :ಮತಾಂತರ ಮಾಡಿ ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಡಿ.ಕೆ ಶಿವಕುಮಾರ್ ಬಂದ್ರೆ ಅವರನ್ನು ವೈಯಕ್ತಿಕವಾಗಿ ಕರೆದುಕೊಂಡು ಹೋಗಿ ಮತಾಂತರಗೊಂಡ ಹೆಣ್ಣುಮಕ್ಕಳ ಪರಿಸ್ಥಿತಿ ತೋರಿಸುತ್ತೇನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರವಾಗಿ ಬೆಳಗಾವಿಯಲ್ಲಿ ಈಶ್ವರಪ್ಪ ಪ್ರತಿಕ್ರಿಯೆ ನೀಡಿರುವುದು.. ಸುವರ್ಣ ಸೌಧದಲ್ಲಿ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ಜಾರಿ ತರುತ್ತಿರುವ ಉದ್ದೇಶ ಯಾರನ್ನೂ ಬಲವಂತವಾಗಿ ಮತಾಂತರ ಮಾಡಬಾರದು ಎಂದು.
ಕಾನೂನು ಬದ್ದವಾಗಿ ಯಾರು ಯಾವ ಮತಕ್ಕೆ ಬೇಕಾದರೂ ಹೋಗಬಹುದು. ಆದರೆ, ಕದ್ದುಮುಚ್ಚಿ ಮತಾಂತರ ಆಗಬಾರದು. ಆಸೆ ಆಮಿಷಗಳಿಗೆ ಒಳಗಾಗಿ ಮತಾಂತರ ಆಗಬಾರದು ಎಂದರು.
ಮತಾಂತರವಾಗಲು ಡಿಸಿ ಬಳಿ ಅರ್ಜಿ ಹಾಕಬಹುದು. ಒಂದು ವೇಳೆ ಬೇಡ ಎಂದರೆ ಹಿಂದಕ್ಕೆ ಬರಬಹುದು. ಕಾಂಗ್ರೆಸ್, ಜೆಡಿಎಸ್ ಯಾಕೆ? ವಿರೋಧಿಸ್ತಿದ್ದಾರೋ ಗೊತ್ತಿಲ್ಲ.
ಮತಾಂತರ ನಿಷೇಧ ವಿಧೇಯಕದ ವಿಷಯ ಬಂದಾಗ ಡಿಕೆಶಿ, ಸಿದ್ದರಾಮಯ್ಯ ಹಾಗೂ ಜಾರ್ಜ್ ಸದನದಲ್ಲೇ ಚರ್ಚೆ ಮಾಡಿ ಹೊರ ಹೋದರು. ಕಾನೂನು ಬದ್ದವಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ಇದನ್ನೂ ಓದಿ:ಸುಳ್ಳು ಹೇಳುವ ಚಾಳಿಗೆ ಚಿಕಿತ್ಸೆ ಇಲ್ಲ.. 'ಸಿದ್ದಕಲೆ'ಯ ನಿಷ್ಣಾತರಿಗೆ ಸುಳ್ಳೇ ದೇವರು : HDK ಕಿಡಿ