ಬೆಳಗಾವಿ :ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿಗೆ ಮೋಸ ಮಾಡುವುದಿಲ್ಲ ಎಂದು ಸಚಿವ ಕೆ ಎಸ್ ಈಶ್ವರಪ್ಪ ಅವರು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ತಿರುಗೇಟು ನೀಡಿದರು.
ಹಿಂದಿನ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿಗೆ ಮೋಸ ಮಾಡಿದ್ದರು. ಈಗ ಬಿಜೆಪಿ ಅಭ್ಯರ್ಥಿಗೆ ಮೋಸ ಮಾಡುತ್ತಿದ್ದಾರೆ ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಮೇಶ್ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದ ಮೇಲೆ ಹೆಬ್ಬಾಳ್ಕರ್‌ಗೆ ಇದು ನೆನಪಾಯ್ತಾ? ಸತ್ಯವನ್ನು ಸತ್ಯವಾಗಿ ಹೇಳಿದ್ರೆ ಅದು ಸತ್ಯ. ಅದೇ ಸತ್ಯವನ್ನ ತಮಗೆ ಬೇಕಾದಂತೆ ತಿರುಚಿ ಹೇಳಿದ್ರೆ ಹೇಗೆ ಎಂದು ಈಶ್ವರಪ್ಪ ಪ್ರಶ್ನಿಸಿದರು.
ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ಸಚಿವ ಕೆ ಎಸ್ ಈಶ್ವರಪ್ಪ ತಿರುಗೇಟು ನೀಡಿರುವುದು.. ಯಾವುದೇ ಕಾರಣಕ್ಕೂ ರಮೇಶ್ ಜಾರಕಿಹೊಳಿ ಬಿಜೆಪಿಗೆ ಮೋಸ ಮಾಡಲ್ಲ. ಮೊದಲ ಮತ ಬಿಜೆಪಿಗೆ, ಎರಡನೇ ಮತ ಸಹೋದರ ಲಖನ್ಗೆ ನೀಡುವಂತೆ ರಮೇಶ್ ಜಾರಕಿಹೊಳಿ ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಇದನ್ನು ತಡೆದುಕೊಳ್ಳುವ ಶಕ್ತಿ ಪಾಪ ಲಕ್ಷ್ಮಿ ಹೆಬ್ಬಾಳಕರ್ಗೆ ಇಲ್ಲ. ಏನ್ ಮಾಡೋದು? ಎಂದರು.
ಇದನ್ನೂ ಓದಿ:ಒಬ್ರು ಬಿಜೆಪಿಗೆ ಹೋಗಿ ಅಲ್ಲಿಯೂ ಬಂಡುಕೋರತನ ಮಾಡ್ತಿದ್ದಾರೆ: ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ
ಒಂದೇ ವೇದಿಕೆಯಲ್ಲಿ ರಮೇಶ್, ಲಖನ್ ಪ್ರತ್ಯೇಕ ಪ್ರಚಾರ ನಡೆಸಿದ್ದಕ್ಕೆ ಪ್ರತಿಕ್ರಿಯೆ ನೀಡಿ, ಅಭ್ಯರ್ಥಿ ಆಗಿ ಲಖನ್ ಮೊದಲ ಮತ ತನಗೆ ನೀಡುವಂತೆ ಕೇಳಿದ್ದಾರಷ್ಟೇ.. ಬಿಜೆಪಿಯ ಯಾವ ಕಾರ್ಯಕರ್ತರಿಗೂ ಗೊಂದಲವಿಲ್ಲ ಎಂದು ಪ್ರತಿಕ್ರಿಯಿಸಿದರು.