ಕರ್ನಾಟಕ

karnataka

ETV Bharat / city

ಬೆಳಗಾವಿ ಲೋಕಸಭಾ ಟಿಕೆಟ್‌ನ ಹಿಂದುತ್ವವಾದಿಗೇ ಕೊಡ್ತೀವಿ.. ಸಚಿವ ಕೆ ಎಸ್‌ ಈಶ್ವರಪ್ಪ - Belgaum Lok Sabha election BJP ticket

ಬೆಳಗಾವಿ ಲೋಕಸಭಾ ಟಿಕೆಟ್ ಅನ್ನು ರಾಯಣ್ಣ ಶಿಷ್ಯಂದರಿಗೆ ಕೊಡ್ತೀವೋ, ಚೆನ್ನಮ್ಮ ಶಿಷ್ಯಂದರಿಗೆ ಕೊಡ್ತೀವೋ, ಶಂಕರಾಚಾರ್ಯ ಶಿಷ್ಯಂದರಿಗೆ ಕೊಡ್ತಿವೋ ನನಗೆ ಗೊತ್ತಿಲ್ಲ ಜನರ ಮಧ್ಯ ನಿಂತು‌ ಗೆದ್ದು ಬರುವ ಹಿಂದುತ್ವದ ವ್ಯಕ್ತಿಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗುವುದು..

KS Eshwarappa
ಕೆ.ಎಸ್​ ಈಶ್ವರಪ್ಪ

By

Published : Nov 28, 2020, 1:48 PM IST

ಬೆಳಗಾವಿ :ಹಿಂದುತ್ವದ ಕೇಂದ್ರ ಬಿಂದು ಆಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಯಾವುದೇ ಕಾರಣಕ್ಕೂ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ ಎಸ್​ ಈಶ್ವರಪ್ಪ ಹೇಳಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್​ ಈಶ್ವರಪ್ಪ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಕುರುಬ ಸಮಾಜ, ಲಿಂಗಾಯತ ಸಮಾಜ, ಒಕ್ಕಲಿಗ ಸಮಾಜ, ಬ್ರಾಹ್ಮಣ ಸಮಾಜ ಅಂತಾ ಪ್ರಶ್ನೆ ಇಲ್ಲ. ಎಲ್ಲ ಒಟ್ಟಿಗೆ ಕುಳಿತು ರಾಷ್ಟ್ರದ ನಾಯಕರ ಜೊತೆ ಚರ್ಚೆ‌ ಮಾಡ್ತೀವಿ. ಯಾರು ಜನರ ಮಧ್ಯೆ ಗೆಲ್ತಾರೆ ಅಂತವರನ್ನ ಹುಡುಕಿ ಗೆಲ್ಲಿಸ್ತೀವಿ.

ಬೆಳಗಾವಿ ಲೋಕಸಭಾ ಟಿಕೆಟ್ ಕುರುಬರಿಗೆ ಕೊಡ್ತಿವೋ, ಲಿಂಗಾಯತರಿಗೆ ಕೊಡ್ತಿವೋ, ಒಕ್ಕಲಿಗರಿಗೆ ಕೊಡ್ತಿವೋ, ಬ್ರಾಹ್ಮಣರಿಗೆ ಕೊಡ್ತಿವೋ ಗೊತ್ತಿಲ್ಲ. ಆದ್ರೆ, ಮುಸಲ್ಮಾನರಿಗಂತೂ ಟಿಕೆಟ್ ಕೊಡಲ್ಲ ಎಂದರು.

ಬೆಳಗಾವಿ ಹಿಂದೂತ್ವದ ಕೇಂದ್ರ, ಇಲ್ಲಿ ಯಾವುದೇ ಕಾರಣಕ್ಕೂ ಮುಸ್ಲಿಮರಿಗೆ ಟಿಕೆಟ್ ಕೊಡೋ‌ ಪ್ರಶ್ನೆ ಬರಲ್ಲ. ಬೆಳಗಾವಿ ಲೋಕಸಭಾ ಟಿಕೆಟ್ ಹಿಂದೂತ್ವವಾದಿಗಳಿಗೆ ಕೊಡ್ತೀವಿ. ರಾಯಣ್ಣ ಶಿಷ್ಯಂದರಿಗೆ ಕೊಡ್ತೀವೋ, ಚೆನ್ನಮ್ಮ ಶಿಷ್ಯಂದರಿಗೆ ಕೊಡ್ತೀವೋ, ಶಂಕರಾಚಾರ್ಯ ಶಿಷ್ಯಂದರಿಗೆ ಕೊಡ್ತಿವೋ ನನಗೆ ಗೊತ್ತಿಲ್ಲ. ಜನರ ಮಧ್ಯ ನಿಂತು‌ ಗೆದ್ದು ಬರುವ ಹಿಂದುತ್ವದ ವ್ಯಕ್ತಿಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗುವುದು ಎಂದರು.

ಸಿದ್ದರಾಮಯ್ಯ ವರ್ಚಸ್ಸು ಎಲ್ಲಿದೆ, ಆರ್‌ಆರ್‌ನಗರ-ಶಿರಾ ಕ್ಷೇತ್ರಗಳಲ್ಲಿ ಏನಾಯ್ತು. ಕಾಂಗ್ರೆಸ್ ಇಲ್ಲ ಪಾಪ ಸಿದ್ದರಾಮಯ್ಯ ಎಲ್ಲಿ. ಈಗಲೂ ಸಿಎಂ ಮುಂದೆಯೂ ಸಿಎಂ ಅಂತಿದ್ದ ಸಿದ್ದರಾಮಯ್ಯ ಎಲ್ಲಿದ್ದಾರೆ.

ಬಾದಾಮಿಯಲ್ಲಿ ಹೆಚ್ಚು ಕಡಿಮೆ ಆಗಿದ್ರೆ ರಾಜಕಾರಣದಲ್ಲಿಯೇ ಸಿದ್ದರಾಮಯ್ಯ ಇರ್ತಿರಲಿಲ್ಲ. ರಾಜಕೀಯವಾಗಿ ನಾವು ಬದುಕಿದ್ದೀವಿ ಅಂತಾ ತೋರಿಸೋಕೆ ಏನೇನೋ ಹೇಳಿಕೆ ಕೊಡ್ತಿದಾರೆ ಎಂದು ಬೆಳಗಾವಿಯಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ನೀಡಿದರು.

ABOUT THE AUTHOR

...view details