ಚಿಕ್ಕೋಡಿ(ಬೆಳಗಾವಿ): ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿ ಸುಳ್ಳು ಹೇಳ್ತಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ನವರು ಯಾವತ್ತೂ ಸತ್ಯ ಮಾತನಾಡುವುದಿಲ್ಲ. ಸತ್ಯ ಮಾತನಾಡಿದರೆ ಅವರಿಗೆ ಸಾವು ಬರುತ್ತದೆ. ಅದಕ್ಕೆ ಸುಳ್ಳು ಮಾತನಾಡುತ್ತಾರೆ ಎಂದರು.
ಕಾಂಗ್ರೆಸ್ನವರು ಸತ್ಯ ಮಾತನಾಡಿದರೆ ಅವರಿಗೆ ಸಾವು ಬರುತ್ತದೆ: ಸಚಿವ ಕಾರಜೋಳ - ಬೆಳಗಾವಿಯಲ್ಲಿ ಗೋವಿಂದ ಕಾರಜೋಳ ಹೇಳಿಕೆ
ಕಾಂಗ್ರೆಸ್ನವರು ಸತ್ಯ ಹೇಳಿದರೆ ಅವರಿಗೆ ಸಾವು ಬರುತ್ತದೆ. ಹಾಗಾಗಿ ಯಾವಾಗಲೂ ಸುಳ್ಳು ಹೇಳುತ್ತಾರೆ ಎಂದು ಸಚಿವ ಗೋವಿಂದ ಕಾರಜೋಳ ಟೀಕಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ
ಬಿಜೆಪಿಯವರು ಸುಳ್ಳು ಹೇಳಿಲ್ಲ. ಯಾವುದನ್ನು ಮಾಡಿದ್ದೇವೋ ಅದನ್ನು ಮಾತ್ರ ಹೇಳಿದ್ದೇವೆ. ಯಾವುದನ್ನು ಮಾಡಿಲ್ವೋ, ಅದನ್ನು ಮಾಡಿಲ್ಲ ಎಂದಿದ್ದೇವೆ. ಸಿದ್ದರಾಮಯ್ಯ 7 ಕೆಜಿ ಅಕ್ಕಿ ಕೊಟ್ಟಿದ್ದೇನೆ ಎಂದು ಭಾಷಣ ಮಾಡ್ತಾರೆ. ಆದರೆ ನಾವು ಈಗಲೂ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಟ್ಟು 10 ಕೆಜಿ ಅಕ್ಕಿ ಕೊಟ್ಟಿದ್ದೇವೆ. ಆದರೆ ನಾವು ಈ ಬಗ್ಗೆ ಜಾಹೀರಾತು ಕೊಟ್ಟಿಲ್ಲ ಎಂದು ಹೇಳಿದರು.
ಇದನ್ನೂ ಓದಿ:7 ಐಎಎಸ್ ಅಧಿಕಾರಿಗಳ ವರ್ಗಾವಣೆ: ಮಹಾಂತೇಶ್ ಬೀಳಗಿಗೆ ಬೆಸ್ಕಾಂ ಹೊಣೆ