ಕರ್ನಾಟಕ

karnataka

ETV Bharat / city

MES ಪುಂಡರಿಗೆ ಬೆಳಗಾವಿ ಪೊಲೀಸರ ಮೂಗುದಾರ.. ಧರಣಿಗಷ್ಟೇ ಸೀಮಿತವಾದ 'ಕರಾಳ ದಿನ'.. - ಕರಾಳ ದಿನ

ಮೆರವಣಿಗೆಗೆ ಬೆಳಗಾವಿ ಮಹಾನಗರ ಪೊಲೀಸರು ‌ಅನುಮತಿ ನೀಡದ ಹಿನ್ನೆಲೆ ಎಂಇಎಸ್​ ಕಾರ್ಯಕರ್ತರು ಬೆಳಗಾವಿ ನಗರದ ಮರಾಠಾ ಮಂದಿರದಲ್ಲಿ ಧರಣಿ ನಡೆಸಿ, ಸಭೆ ನಡೆಸುತ್ತಿದ್ದಾರೆ. ಪ್ರತಿ ವರ್ಷ ಕನ್ನಡ ರಾಜ್ಯೋತ್ಸವಕ್ಕೆ ಪ್ರತಿಯಾಗಿ ಎಂಇಎಸ್​ ಕರಾಳ ದಿನಾಚರಣೆ ನಡೆಸುತ್ತದೆ..

ಕನ್ನಡ ರಾಜ್ಯೋತ್ಸವ ಹಿನ್ನೆಲೆ ಬೆಳಗಾವಿಯಲ್ಲಿ ಎಂಇಎಸ್​ ಧರಣಿ
ಕನ್ನಡ ರಾಜ್ಯೋತ್ಸವ ಹಿನ್ನೆಲೆ ಬೆಳಗಾವಿಯಲ್ಲಿ ಎಂಇಎಸ್​ ಧರಣಿ

By

Published : Nov 1, 2021, 12:01 PM IST

Updated : Nov 1, 2021, 12:20 PM IST

ಬೆಳಗಾವಿ :ಕನ್ನಡ ರಾಜ್ಯೋತ್ಸವ ಹಿನ್ನೆಲೆ ಕರಾಳ ದಿನ ಆಚರಿಸುತ್ತಿದ್ದ ಎಂಇಎಸ್ ಪುಂಡರಿಗೆ ನಗರ ಪೊಲೀಸರು ಮೂಗುದಾರ ಹಾಕಿದ್ದಾರೆ.

ಮೆರವಣಿಗೆಯಿಂದ ಹಿಂದೆ ಸರಿದ ಎಂಇಎಸ್​ ಕಾರ್ಯಕರ್ತರು ಇಲ್ಲಿನ ಮರಾಠಾ ಮಂದಿರದಲ್ಲಿ ಧರಣಿ ನಡೆಸಿ, ಸಭೆ ನಡೆಸುತ್ತಿದ್ದಾರೆ. ಮೆರವಣಿಗೆಗೆ ಬೆಳಗಾವಿ ಮಹಾನಗರ ಪೊಲೀಸರು ‌ಅನುಮತಿ ನೀಡಿಲ್ಲ. ಹೀಗಾಗಿ, ಕೆಲವೇ ಜನರು ಇಲ್ಲಿನ ಮರಾಠಾ ಮಂದಿರದಲ್ಲಿ ಸೇರಿ ಸಭೆ ನಡೆಸುತ್ತಿದ್ದಾರೆ.

ಧರಣಿಗಷ್ಟೇ ಸೀಮಿತವಾದ 'ಕರಾಳ ದಿನ'

ಅನುಮತಿ ನೀಡದಿದ್ದಕ್ಕೆ ಅಸಮಾಧಾನಗೊಂಡಿರುವ ಎಂಇಎಸ್ ಕಾರ್ಯಕರ್ತರು, ಗಡಿ ಭಾಗದ ಪ್ರದೇಶಗಳು ಮಹಾರಾಷ್ಟ್ರಕ್ಕೆ‌ ಸೇರಬೇಕು ಎಂದು ಘೋಷಣೆ ಕೂಗಿ ಉದ್ಧಟತನ ಪ್ರದರ್ಶಿಸಿದರು.

ಅಲ್ಲದೇ ಮೈಕ್ ಬಳಸಲು ಕೂಡ ಪೊಲೀಸರು ಅನುಮತಿ ನೀಡಿಲ್ಲ. ಪ್ರತಿ ವರ್ಷ ಕನ್ನಡ ರಾಜ್ಯೋತ್ಸವಕ್ಕೆ ಪ್ರತಿಯಾಗಿ ಎಂಇಎಸ್​ ಕರಾಳ ದಿನಾಚರಣೆ ನಡೆಸುತ್ತದೆ.

ಓದಿ: ಕನ್ನಡ ರಾಜ್ಯೋತ್ಸವ ಜನೋತ್ಸವ ಆಗಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Last Updated : Nov 1, 2021, 12:20 PM IST

ABOUT THE AUTHOR

...view details