ಕರ್ನಾಟಕ

karnataka

ETV Bharat / city

ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿದವರನ್ನು ಗುಂಡಿಟ್ಟು ಕೊಲ್ಲಬೇಕು : ಸದನದಲ್ಲಿ ಸಚಿವ ಕೆ.ಎಸ್​. ಈಶ್ವರಪ್ಪ ಕೆಂಡ

ಎಂಇಎಸ್​ ಪುಂಡರು ಕನ್ನಡ ಧ್ವಜ ಮತ್ತು ಸಂಗೊಳ್ಳಿ ರಾಯಣ್ಣ ವಿಗ್ರಹವನ್ನು ವಿರೂಪಗೊಳಿಸಿದ್ದು ಖಂಡನೀಯ..

eshwarappa
ಈಶ್ವರಪ್ಪ ಕೆಂಡ

By

Published : Dec 20, 2021, 6:02 PM IST

Updated : Dec 20, 2021, 7:45 PM IST

ಬೆಳಗಾವಿ :ಎಂಇಎಸ್​ ಪುಂಡಾಟಿಕೆಯಿಂದ ಸಂಗೊಳ್ಳಿ ರಾಯಣ್ಣ ವಿಗ್ರಹ ವಿರೂಪ ಮತ್ತು ಕನ್ನಡ ಧ್ವಜ ಸುಟ್ಟು ಹಾಕಿದ್ದರ ವಿರುದ್ಧ ಕೆಂಡವಾಗಿರುವ ಸಚಿವ ಕೆ.ಎಸ್​. ಈಶ್ವರಪ್ಪ ಅವರು, 'ಇಂತಹ ಕಿಡಿಗೇಡಿಗಳನ್ನು ಗುಂಡಿಕ್ಕಿ ಸಾಯಿಸಬೇಕು' ಎಂದು ಗುಡುಗಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಾತನಾಡಿರುವ ಅವರು, ಎಂಇಎಸ್​ ಪುಂಡರು ಕನ್ನಡ ಧ್ವಜ ಮತ್ತು ಸಂಗೊಳ್ಳಿ ರಾಯಣ್ಣ ವಿಗ್ರಹವನ್ನು ವಿರೂಪಗೊಳಿಸಿದ್ದು ಖಂಡನೀಯ. ಬೆಳಗಾವಿಯಲ್ಲಿ ಪುಂಡಾಟ ಪ್ರದರ್ಶಿಸುತ್ತಿರುವುದು ಮಹಾರಾಷ್ಟ್ರ ಏಕೀಕರಣ ಸಮಿತಿ ಅಲ್ಲ, ಇದು ಮಹಾರಾಷ್ಟ್ರ ಹೇಡಿಗಳ ಸಮಿತಿ.

ರಾತ್ರಿ ಹೊತ್ತಿನಲ್ಲಿ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ವಿರೂಪಗೊಳಿಸಿದ್ದಾರೆ. ಇವರು ಗಂಡಸರೇ ಆಗಿದ್ದರೆ, ಹಗಲೊತ್ತಿನಲ್ಲಿ ರಾಯಣ್ಣನ ಪುತ್ಥಳಿ ಮುಟ್ಟಲಿ ನೋಡೋಣ ಎಂದು ಸವಾಲು ಹಾಕಿದರು. ಎಂಇಎಸ್ ಪುಂಡರನ್ನು ಗಡಿಪಾರು ಮಾಡಿದರೆ ಸಾಲುವುದಿಲ್ಲ, ಗುಂಡಿಕ್ಕಿ ಕೊಲ್ಲಬೇಕು.

ಇವರು ಕನ್ನಡಿಗರ ಕೈಗೆ ಸಿಕ್ಕರೆ ಚಿಂದಿಯಾಗಿ ಹೋಗುತ್ತಾರೆ. ಕನ್ನಡಧ್ವಜ ಸುಟ್ಟು ಹಾಕಿದರೂ ಪುಂಡರ ವಿರುದ್ಧ ಕ್ರಮವಾಗಿಲ್ಲವೇಕೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಪ್ರಶ್ನಿಸಿದರು.

ಎಂಇಎಸ್‌ ವಿರುದ್ಧ ಸದನದಲ್ಲಿ ಸಚಿವ ಕೆ ಎಸ್​ ಈಶ್ವರಪ್ಪ ಕೆಂಡಕಾರಿರುವುದು..

ಸಂಗೊಳ್ಳಿ ರಾಯಣ್ಣ ಜೀವಂತವಾಗಿ ಇರುವಾಗ ಅವರನ್ನು ಹಿಡಿಯಲು ಹೇಡಿಗಳು ಸಹಕಾರ ಕೊಟ್ಟರು. ಸತ್ತ ನಂತರವೂ ಹೇಡಿಗಳಿಂದ ತೊಂದರೆ ಅನುಭವಿಸುವ ಸ್ಥಿತಿ ಇದೆ. ಆದರೆ, ಇದು ಹೇಡಿಗಳ ನಾಡಲ್ಲ, ಹೇಡಿಗಳಿಗೆ ಈ ನಾಡಲ್ಲಿ ಅವಕಾಶ ಕೊಡಲ್ಲ ಎಂಬ ತೀರ್ಮಾನ ತೆಗೆದುಕೊಳ್ಳಬೇಕು ಹಾಗೂ ಕೇಂದ್ರಕ್ಕೂ ತಿಳಿಸಬೇಕು ಎಂದು ಆಗ್ರಹಿಸಿದರು.

ಪುಂಡರು ಕರ್ನಾಟಕವನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಕೃತ್ಯ ಎಸಗಿದವರ ವಿರುದ್ಧ ತನಿಖೆ ಆಗಬೇಕು. ಇದೊಂದು ವ್ಯವಸ್ಥಿತ ಪಿತೂರಿ. ಈ ಕೃತ್ಯ ಎಸಗಿದ ದೇಶದ್ರೋಹಿಗಳ ಹಿಂದೆ ಯಾರಾರು ಇದ್ದಾರೆ ಎಂಬುದರ ತನಿಖೆ‌‌ ಆಗಬೇಕು. ಎಂಇಎಸ್ ಬ್ಯಾನ್ ಮಾಡಬೇಕು ಎಂಬುವುದು ನಮ್ಮೆಲ್ಲರ ಒಂದೇ ಅಭಿಪ್ರಾಯ. ಅದರ ಜೊತೆ ಈ ಘಟನೆಯ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ಮಾಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಕಾಂಗ್ರೆಸ್​ಗೆ 'ಮಹಿಳಾಘಾತ'.. ಚುನಾವಣೆಗೆ ನಿಲ್ಲಲು ಬರ್ತಿಲ್ವಂತೆ ಮಹಿಳಾಮಣಿಗಳು!

Last Updated : Dec 20, 2021, 7:45 PM IST

ABOUT THE AUTHOR

...view details