ಕರ್ನಾಟಕ

karnataka

ETV Bharat / city

ಜ. 28 ಅಥವಾ 29ರ ನಂತರ ಎಂಇಎಸ್ ಮತ್ತು ಶಿವಸೇನೆ ಮುಖಂಡರೊಂದಿಗೆ ಸಭೆ: ಬೆಳಗಾವಿ ಡಿಸಿ - ಬೆಳಗಾವಿ ಜಿಲ್ಲಾಧಿಕಾರಿಗಳ ಜೊತೆ ಎಂಇಎಸ್ ಮತ್ತು ಶಿವಸೇನೆ ಮುಖಂಡ ಸಭೆ

ಕರ್ನಾಟಕ‌ ಹೈಕೋರ್ಟ್ ಕೂಡ ಕನ್ನಡ ಧ್ವಜಕ್ಕೆ ಹಾರಾಟಕ್ಕೆ ಅವಕಾಶ ನೀಡಿಲ್ಲ. ಆದರೆ ಕೆಲವರು ಕನ್ನಡ ಧ್ವಜಸ್ತಂಭವನ್ನು ‌ಕಾನೂನು ಬಾಹಿರವಾಗಿ ಹಾಕಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಎಂಇಎಸ್, ಶಿವಸೇನೆ ಮುಖಂಡರೊಂದಿಗೆ ಕೆಲವು ಗೊಂದಲಗಳ ಕುರಿತು ಚರ್ಚಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಎಂಇಎಸ್​ ಮುಖಂಡರು ಮನವಿ ಮಾಡಿದರು.

meeting-with-mes-and-shivsena-leaders-after-28th-or-29th
ಬೆಳಗಾವಿ ಡಿಸಿ

By

Published : Jan 21, 2021, 4:22 PM IST

ಬೆಳಗಾವಿ: ಕನ್ನಡ ಧ್ವಜ ವಿವಾದದ ಕುರಿತು ಚರ್ಚಿಸಲು ಅವಕಾಶ ನೀಡುವಂತೆ ಎಂಇಎಸ್ ಮತ್ತು ಶಿವಸೇನೆ ಮುಖಂಡರು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರನ್ನು ಭೇಟಿ ಮಾಡಿ ಒತ್ತಾಯಿಸಿದರು.

ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜಸ್ತಂಭ ಸ್ಥಾಪನೆ ಮಾಡಿರುವುದು ಕಾನೂನು ಬಾಹಿರವಾಗಿದೆ. ಜಿಲ್ಲಾಡಳಿತ ಚರ್ಚಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ. ಪಾಲಿಕೆ ಠರಾವು ಹಾಕಿ ಭಗವಾ ಧ್ವಜ ಹಾಕಲಾಗಿತ್ತು. ಆದರೂ ಜಿಲ್ಲಾಡಳಿತ ತೆರವುಗೊಳಿಸಿತ್ತು. ಈಗ ಯಾವುದೇ ಪರವಾನಗಿ ಇಲ್ಲದೇ ಕನ್ನಡ ಧ್ವಜಸ್ತಂಭ ಸ್ಥಾಪಿಸಲಾಗಿದೆ.

ಜ. 28 ಅಥವಾ 29ರ ನಂತರ ಎಂಇಎಸ್ ಮತ್ತು ಶಿವಸೇನೆ ಮುಖಂಡರೊಂದಿಗೆ ಸಭೆ

ಜತೆಗೆ ಕರ್ನಾಟಕ‌ ಹೈಕೋರ್ಟ್ ಕೂಡ ಕನ್ನಡ ಧ್ವಜಕ್ಕೆ ಹಾರಾಟಕ್ಕೆ ಅವಕಾಶ ನೀಡಿಲ್ಲ. ಆದರೆ ಕೆಲವರು ಕನ್ನಡ ಧ್ವಜಸ್ತಂಭವನ್ನು ‌ಕಾನೂನು ಬಾಹಿರವಾಗಿ ಹಾಕಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಎಂಇಎಸ್, ಶಿವಸೇನೆ ಮುಖಂಡರೊಂದಿಗೆ ಕೆಲವು ಗೊಂದಲಗಳ ಕುರಿತು ಚರ್ಚಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಓದಿ-ನಡೆದಾಡುವ ದೇವರ ಎರಡನೇ ವರ್ಷದ ಪುಣ್ಯಸ್ಮರಣೆ : ಸಿದ್ಧಗಂಗೆಯಲ್ಲಿ ಮೊಳಗಿದ ಓಂಕಾರ

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜ. 28 ಅಥವಾ 29ರಂದು ಎಂಇಎಸ್ ಮತ್ತು ಶಿವಸೇನೆ ಮುಖಂಡರೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು. ಸದ್ಯ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಹಂಚಿಕೆ ಹಾಗೂ ಕೆಡಿಪಿ ಸಭೆಯ ನಂತರ ಸಭೆ ನಡೆಸಲಾಗುವುದು. ಧ್ವಜಸ್ತಂಭ ವಿಚಾರದ ಬಗ್ಗೆ ಈಗಲೇ ಚರ್ಚಿಸಿಲು ಸಾಧ್ಯವಿಲ್ಲ. ಜ. 28 ಅಥವಾ 29ರ ನಂತರ ಸಭೆ ಕರೆದು ಮುಕ್ತವಾಗಿ ಚರ್ಚೆಗೆ ಅವಕಾಶವಿದೆ‌ ಎಂದರು.

ಗಡಿಯಲ್ಲಿ ‌ಕ್ಯಾತೆ ತೆಗೆಯುವ ಶಿವಸೇನೆ ಮುಖಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಹಾರಾಷ್ಟ್ರದಿಂದ ಭಗವಾ ಧ್ವಜ ನೆಡಲು ಯಾರಿಗೂ ಅವಕಾಶವಿಲ್ಲ. ಯಾರೂ‌ ಕೂಡ ಕಾನೂನನ್ನು ‌ಕೈಗೆ ತೆಗೆದುಕೊಳ್ಳಬಾರದು. ಕಾನೂನು ಸುವ್ಯವಸ್ಥೆಯನ್ನು ಪ್ರತಿಯೊಬ್ಬರೂ ಕಾಪಾಡಬೇಕು. ಗಲಾಟೆ ಮಾಡೋರು‌ ಯಾರೇ ಆದ್ರೂ ಅವ್ರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು.

ಎಂಇಎಸ್ ಮುಖಂಡರಾದ ದೀಪಕ‌ ದಳವಿ,‌ ಮನೋಹರ‌ ಕಿಣೇಕರ್, ವಿಕಾಸ ಕಲಘಟಗಿ, ಮದನ್ ಭಾಮನೆ, ಶುಭಂ ಶಳಕೆ, ನೇತಾಜಿ ಜಾಧವ, ಶಿವಸೇನೆ ಮುಖಂಡ ಪ್ರಕಾಶ ಶಿರೋಳಕರ್ ಮತ್ತಿತರರು ಇದ್ದರು.

ABOUT THE AUTHOR

...view details