ಕರ್ನಾಟಕ

karnataka

ETV Bharat / city

ಎಂ ಬಿ ಪಾಟೀಲ್ ನಾಗನೂರ ಮಠಕ್ಕೆ ಭೇಟಿ ನೀಡಿದ್ದರಲ್ಲಿ ರಾಜಕೀಯ ಉದ್ದೇಶವಿಲ್ಲ : ತೋಂಟದಾರ್ಯ ಶ್ರೀಗಳು

ಮುಂಬೈ ಕರ್ನಾಟಕದ ನಾಲ್ಕು ಜಿಲ್ಲೆಗಳನ್ನು ಸೇರಿಸಿ ಕಿತ್ತೂರು ಕರ್ನಾಟಕ ಮಾಡುವಂತೆ ಒತ್ತಾಯಿಸಿದ್ದೇವೆ. ಅದನ್ನು ಇನ್ನೂ ಡಿಕ್ಲೇರ್ ಮಾಡಿಲ್ಲ. ಈ ಕೆಲಸ ಮಾಡಲು ಹಣ ಏನೂ ಬೇಕಾಗುವುದಿಲ್ಲ. ಬರೀ ಸರ್ಕಾರದ ಆದೇಶ ಮಾತ್ರ ಸಾಕು. ಆದ್ರೆ, ಅದನ್ನು ಅವರು ಮಾಡುತ್ತಿಲ್ಲ. ಉತ್ತರ ಕರ್ನಾಟಕವನ್ನ ನಿರ್ಲಕ್ಷ್ಯ ಮಾಡಿದ್ರೆ ಮುಂದಿನ ಚುನಾವಣೆಗಳಲ್ಲಿ ಜನರು ಸರಿಯಾಗಿ ಪಾಠ ಕಲಿಸುತ್ತಾರೆ ಎಂದು ಈ ಹಿಂದೆಯೇ ಎಚ್ಚರಿಸಿದರೂ ಅಭಿವೃದ್ಧಿಗೆ ಯಡಿಯೂರಪ್ಪ ಮನಸ್ಸು ಮಾಡುತ್ತಿಲ್ಲ..

mb-patel-visit-to-naganura-math-is-not-a-political-intentioned
ತೋಂಟದಾರ್ಯ ಶ್ರೀಗಳು

By

Published : Jul 16, 2021, 10:20 PM IST

ಬೆಳಗಾವಿ :ನನಗೆ ಯಾವ ರಾಜಕೀಯ ನಾಯಕರ ಸಂಪರ್ಕವಿಲ್ಲ. ಶಿವಾನುಭವ ಪತ್ರಿಕೆ ಪುನರ್ ಮುದ್ರಣ ಸೇರಿದಂತೆ ನಮ್ಮ ಸಮಾಜದ, ಧರ್ಮದ ಹಾಗೂ ಸಂಸ್ಕೃತಿಗಳ ಬಗ್ಗೆ ಮಾಜಿ ಸಚಿವ ಎಂ ಬಿ ಪಾಟೀಲ ಅವರೊಂದಿಗೆ ಚರ್ಚೆ ನಡೆಸಿದ್ದೇವೆ. ಧನಸಹಾಯ ನೀಡುವಂತೆ ಕೇಳಿಕೊಂಡಿದ್ದೇವೆ ಹೊರತು ಅವರೊಂದಿಗೆ ಯಾವುದೇ ರೀತಿಯ ರಾಜಕೀಯ ಚರ್ಚೆಗಳನ್ನು ಮಾಡಿಲ್ಲ ಎಂದು ಗದಗಿನ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿಗಳು ಹೇಳಿದರು.

ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಯಾವ ರಾಜಕೀಯ ನಾಯಕರ ಸಂಪರ್ಕವಿಲ್ಲ. ಆದ್ರೆ, ಮಾಜಿ ಸಚಿವ ಎಂ ಬಿ ಪಾಟೀಲರು ಹಲವು ದಿನಗಳಿಂದ ಮಠಕ್ಕೆ ಬರುವುದಾಗಿ ಹೇಳಿದ್ದರು. ಹೀಗಾಗಿ, ಇವತ್ತು ಬಂದಿದ್ದರು.

ಈ ವೇಳೆ ಪ.ಗು.ಹಳ್ಳಕಟ್ಟಿಯವರು ನಡೆಸುತ್ತಿದ್ದ ಶಿವಾನುಭವ ಪತ್ರಿಕೆ ಪುನರ್ ಮುದ್ರಣ ಸೇರಿದಂತೆ ನಮ್ಮ ಸಮಾಜದ, ಧರ್ಮದ ಹಾಗೂ ಸಂಸ್ಕೃತಿಗಳ ಬಗ್ಗೆ ಎಂ ಬಿ ಪಾಟೀಲ ಅವರೊಂದಿಗೆ ಚರ್ಚೆ ನಡೆಸಿದ್ದೇವೆ. ಧನಸಹಾಯ ನೀಡುವಂತೆ ಕೇಳಿಕೊಂಡಿದ್ದೇವೆ. ಅವರೊಂದಿಗೆ ಯಾವುದೇ ರೀತಿಯ ರಾಜಕೀಯ ಚರ್ಚೆಗಳನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ನಾಗನೂರ ಮಠಕ್ಕೆ ಎಂ.ಬಿ.ಪಾಟೀಲ್ ಭೇಟಿ ರಾಜಕೀಯ ಉದ್ದೇಶಿತವಲ್ಲ

ಉತ್ತರ ಕರ್ನಾಟಕ್ಕೆ ಸಿಎಂ ಯಡಿಯೂರಪ್ಪ ಸ್ಪಂದಿಸುತ್ತಿಲ್ಲ : ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಿದ್ದಾಗ ನಾವು ಪ್ರತಿಭಟನೆ ನಡೆಸುತ್ತಿದ್ದ ಸುವರ್ಣಸೌಧಕ್ಕೆ ಬಂದು ಸರ್ಕಾರ ಅಧಿಕಾರಕ್ಕೆ ಬಂದ 15 ದಿನಗಳಲ್ಲಿ ಸುವರ್ಣಸೌಧಕ್ಕೆ ಕಚೇರಿಗಳನ್ನು ಸ್ಥಳಾಂತರಿಸುತ್ತೇನೆ ಎಂದು ಭರವಸೆ ನೀಡಿದ್ದರು. ಆದ್ರೆ, ಅವರು ಅಧಿಕಾರಕ್ಕೆ ಬಂದು 2 ವರ್ಷವಾದ್ರೂ ಇನ್ನೂ ಕೂಡ ಕಚೇರಿಗಳನ್ನು ಸ್ಥಳಾಂತರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮುಂಬೈ ಕರ್ನಾಟಕದ ನಾಲ್ಕು ಜಿಲ್ಲೆಗಳನ್ನು ಸೇರಿಸಿ ಕಿತ್ತೂರು ಕರ್ನಾಟಕ ಮಾಡುವಂತೆ ಒತ್ತಾಯಿಸಿದ್ದೇವೆ. ಅದನ್ನು ಇನ್ನೂ ಡಿಕ್ಲೇರ್ ಮಾಡಿಲ್ಲ. ಈ ಕೆಲಸ ಮಾಡಲು ಹಣ ಏನೂ ಬೇಕಾಗುವುದಿಲ್ಲ. ಬರೀ ಸರ್ಕಾರದ ಆದೇಶ ಮಾತ್ರ ಸಾಕು. ಆದ್ರೆ, ಅದನ್ನು ಅವರು ಮಾಡುತ್ತಿಲ್ಲ. ಉತ್ತರ ಕರ್ನಾಟಕವನ್ನ ನಿರ್ಲಕ್ಷ್ಯ ಮಾಡಿದ್ರೆ ಮುಂದಿನ ಚುನಾವಣೆಗಳಲ್ಲಿ ಜನರು ಸರಿಯಾಗಿ ಪಾಠ ಕಲಿಸುತ್ತಾರೆ ಎಂದು ಈ ಹಿಂದೆಯೇ ಎಚ್ಚರಿಸಿದರೂ ಅಭಿವೃದ್ಧಿಗೆ ಯಡಿಯೂರಪ್ಪ ಮನಸ್ಸು ಮಾಡುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಪ್ರತ್ಯೇಕ ಉತ್ತರಕರ್ನಾಟಕ ಅರ್ಥಹೀನ : ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಹೋರಾಟ ಅರ್ಥಹೀನ. ಎಲ್ಲರೂ ಸೇರಿಕೊಂಡು ಕಷ್ಟಪಟ್ಟು ಹೋರಾಟ ಮಾಡಿ ಅಖಂಡ ಕರ್ನಾಟಕ ಮಾಡಿದ್ದಾರೆ. ಹೀಗಾಗಿ, ಇದರಲ್ಲಿ ಇದ್ದುಕೊಂಡೇ ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಹೋರಾಡಬೇಕು. ಆದ್ರೆ, ನಮ್ಮ ಹೋರಾಟಗಳನ್ನೇ ಕೆಲ ರಾಜಕೀಯ ನಾಯಕರು ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂದು ಜೆಡಿಎಸ್ ಮುಖಂಡ ಅಶೋಕ ಪೂಜಾರಿ ವಿರುದ್ಧ ಶ್ರೀಗಳು ಹರಿಹಾಯ್ದರು.

ಪ್ರಾದೇಶಿಕ ಕಚೇರಿ ಸ್ಥಳಾಂತರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ಪ್ರಾದೇಶಿಕ ಆಯುಕ್ತರ ಕಚೇರಿಗಳು ಅನಾವಶ್ಯಕ ಖರ್ಚು ಎಂಬ ವರದಿ ಸರ್ಕಾರಕ್ಕೆ ಹೋಗಿದೆ. ಆದ್ರೆ, ಗಡಿ ಜಿಲ್ಲೆ ಆಗಿರುವ ಬೆಳಗಾವಿ ಜಿಲ್ಲೆ ಸೂಕ್ಷ್ಮ ಪ್ರದೇಶಗಳಲ್ಲಿ ಸರ್ಕಾರಿ ಕಚೇರಿಗಳು ಇರುವುದು ಎಷ್ಟು ಮಹತ್ವದ್ದು ಎನ್ನುವ ಅರಿವು ಸರ್ಕಾರಕ್ಕೆ ಆಗಬೇಕಿದೆ. ಬೇರೆ ಸಂದರ್ಭದಲ್ಲಿ ಮನವರಿಕೆ ಮಾಡಿ ಕೊಟ್ಟಾಗ ರಾಜಕಾರಣಿಗಳು ತಕ್ಷಣವೇ ಸ್ಪಂದಿಸುತ್ತಿದ್ದರು. ಆದರೀಗ ಸಿಎಂ ಯಡಿಯೂರಪ್ಪ ಕಿವಿಗೊಡುತ್ತಿಲ್ಲ ಎಂದು ಖಾರವಾಗಿ ನುಡಿದರು.

ABOUT THE AUTHOR

...view details