ಚಿಕ್ಕೋಡಿ(ಬೆಳಗಾವಿ): ದೊಣ್ಣೆಯಿಂದ ಹೊಡೆದು ಪತ್ನಿಯನ್ನ ಕೊಲೆ ಮಾಡಿ ಪರಾರಿಯಾಗಿದ್ದ ಪತಿರಾಯನೊಬ್ಬ ಪಾಪಪ್ರಜ್ಞೆ ಕಾಡಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ನಡೆದಿದೆ. ಬಾಳವ್ವ ಮುತ್ತಪ್ಪ ಬಿರಾಜ (30) ಪತಿಯ ದೊಣ್ಣೆ ಹೊಡೆತಕ್ಕೆ ಸಾವನ್ನಪ್ಪಿದ್ದರು.
ಪ್ರಕರಣ ಹಿನ್ನೆಲೆ:ಕಳೆದ ಮಂಗಳವಾರ ರಾತ್ರಿ ಹತ್ತು ಗಂಟೆ ಸುಮಾರಿಗೆ ಮುತ್ತಪ್ಪ ಬಿರಾಜ್, ಪತ್ನಿ ಬಾಳವ್ವ ಬಳಿ ಸಾರಾಯಿ ಕುಡಿಯಲು ಹಣ ಕೇಳಿದ್ದಾನೆ. ಈ ವೇಳೆ ಆಕೆ ಹಣ ಕೊಡಲು ನಿರಾಕರಿಸಿದಾಗ ಮಾತಿಗೆ ಮಾತು ಬೆಳೆದು ಕುಡಿದ ನಶೆಯಲ್ಲಿ ಪತ್ನಿಯ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ.