ಬೆಳಗಾವಿ: ಬೈಕ್ ಡಿಕ್ಕಿ ಹೊಡೆದಿದಕ್ಕೆ ಆಕ್ರೋಶಗೊಂಡ ಪದಾಚಾರಿಯೊಬ್ಬ ಬೈಕ್ ಸವಾರನನ್ನೇ ಕಾಲಿನಿಂದ ಒದ್ದು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕಿತ್ತೂರು ಪಟ್ಟಣದ ಚೌಕಿಮಠ ಕ್ರಾಸ್ ಬಳಿ ನಡೆದಿದೆ.
ಬೆಳಗಾವಿ: ಬೈಕ್ ಡಿಕ್ಕಿ ಹೊಡೆದಿದ್ದಕ್ಕೆ ಸವಾರನನ್ನು ಹೊಡೆದು ಕೊಂದ ಪಾದಚಾರಿ.. - ಬೆಳಗಾವಿ ಡಿಕ್ಕಿ ಹೊಡೆದಿದ್ದಕ್ಕೆ ಬೈಕ್ ಸವಾರನ ಕೊಲೆ ಮಾಡಿದ ಸ್ನೇಹಿತರು
ವಿಜಯ ಮಹಾಂತೇಶ ಹಿರೇಮಠ ಎಂಬುವವರು ಬೈಕ್ ಮೇಲೆ ಹೋಗುತ್ತಿದ್ದಾಗ ಹಿಂಬದಿಯಿಂದ ಅಪರಿಚಿತ ಕಾರು ಡಿಕ್ಕಿ ಹೊಡೆದಿದೆ. ಆಗ ಸವಾರನ ನಿಯಂತ್ರಣ ತಪ್ಪಿ ಬೈಕ್ ಪಾದಚಾರಿಗೆ ಗುದ್ದಿದೆ. ಇದರಿಂದ ಕುಪಿತನಾದ ಅದೃಶ್ಯ ಹಾಗೂ ಆತನ ಸ್ನೇಹಿತರ ಜೊತೆಗೂಡಿ ಸವಾರನ ಮೇಲೆ ಹಲ್ಲೆ ಮಾಡಿದ್ದಾರೆ.
ಬೈಕ್ ಸವಾರ ವಿಜಯಮಹಾಂತೇಶ್ ಹಿರೇಮಠ (67) ಮೃತ ದುರ್ದೈವಿ. ಕಿತ್ತೂರು ತಾಲೂಕಿನ ಮಲ್ಲಾಪುರ ಗ್ರಾಮದ ಅದೃಶ್ಯ ಎಂಬಾತ ಸವಾರನನ್ನು ಹತ್ಯೆ ಮಾಡಿರುವ ಆರೋಪಿ. ವಿಜಯಮಹಾಂತೇಶ ಹಿರೇಮಠ ಎಂಬುವವರು ಬೈಕ್ ಮೇಲೆ ಹೋಗುತ್ತಿದ್ದಾಗ ಹಿಂಬದಿಯಿಂದ ಕಾರೊಂದು ಡಿಕ್ಕಿ ಹೊಡೆದಿದೆ. ಆಗ ನಿಯಂತ್ರಣ ತಪ್ಪಿದ ಬೈಕ್ ಪಾದಚಾರಿ ಅದೃಶ್ಯಗೆ ಗುದ್ದಿದೆ. ಇದರಿಂದ ಕುಪಿತನಾದ ಅದೃಶ್ಯ ಹಾಗೂ ಆತನ ಸ್ನೇಹಿತರು ಸವಾರನ ಮೇಲೆ ಹಲ್ಲೆ ಮಾಡಿದ್ದಾರೆ.
ಹಲ್ಲೆಯಿಂದ ತೀವ್ರ ಅಸ್ವಸ್ಥರಾದ ವಿಜಯ ಮಹಾಂತೇಶ್ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತಕ್ಷಣವೇ ಕಿತ್ತೂರು ಪೊಲೀಸರು ಆರೋಪಿ ಅದೃಶ್ಯನನ್ನು ಬಂಧಿಸಿದ್ದಾರೆ.