ಬೆಳಗಾವಿ: 73 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಮಾಡಿದ್ದ ಧ್ವಜ ಹಾಗೂ ಧ್ವಜಕಂಬವನ್ನೇ ವ್ಯಕ್ತಿಯೊಬ್ಬ ಕಿತ್ತೆಸೆದಿರುವ ಘಟನೆ ಜಿಲ್ಲೆಯ ಭವಾನಿ ನಗರದ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಧ್ವಜಕಂಬವನ್ನೇ ಕಿತ್ತುಹಾಕಿದ ದ್ರೋಹಿ.. ಕುಂದಾನಗರಿಯಲ್ಲಿ ಕೃತ್ಯ
ಧ್ವಜಾರೋಹಣ ಮಾಡಿದ್ದ ಧ್ವಜ ಹಾಗೂ ಧ್ವಜಕಂಬವನ್ನೇ ಕಿತ್ತೆಸೆದ ವ್ಯಕ್ತಿಗೆ ಸ್ಥಳೀಯರು ಪಾಠ ಕಲಿಸಿ, ಬೆಳಗಾವಿ ಗ್ರಾಮೀಣ ಠಾಣಾ ಪೊಲೀಸರಿಗೆ ಆತನನ್ನು ಒಪ್ಪಿಸಿದ್ದಾರೆ.
ಧ್ವಜಕಂಬವನ್ನೇ ಕಿತ್ತುಹಾಕಿದ ವ್ಯಕ್ತಿಗೆ ಪಾಠ ಕಲಿಸಿದ ಸ್ಥಳೀಯರು
ಸ್ಥಳೀಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ ಇಂದು ಬೆಳಗ್ಗೆ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದ್ದರು. ಬಳಿಕ ಶಾಲಾ ಮೈದಾನ ತನ್ನದೆಂದ ಸ್ಥಳೀಯ ನಿವಾಸಿ ಆನಂದ ಕೋಡಗ ಎಂಬುವವನು ಧ್ವಜ ಹಾಗೂ ಧ್ವಜಕಂಬ ಕಿತ್ತೆಸೆದಿದ್ದಾನೆ.
ಸ್ಥಳೀಯರು ತಕ್ಷಣವೇ ಆನಂದನನ್ನು ಹಿಡಿದು ತಂದು ಮತ್ತೆ ಧ್ವಜಕಂಬ ನಿಲ್ಲಿಸಿ ಧ್ವಜ ಹಾರಿಸಿದ್ದಾರೆ. ಅಲ್ಲದೆ, ಧ್ವಜದ ಕಂಬಕ್ಕೆ ಹಣೆ ಮುಟ್ಟಿಸಿ ನಮಸ್ಕರಿಸಲು ಹೇಳಿ. ಬಳಿಕ ಆತನನ್ನು ಬೆಳಗಾವಿ ಗ್ರಾಮೀಣ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ.