ಕರ್ನಾಟಕ

karnataka

ETV Bharat / city

ಜಮೀನಿನಲ್ಲಿ ಗಾಂಜಾ ಬೆಳೆದ ರೈತ ಸೇರಿ 2.50 ಲಕ್ಷ ಮೌಲ್ಯದ ಮಾಲು ವಶಕ್ಕೆ - ganja

2.50 ಲಕ್ಷ ರೂ ಮೌಲ್ಯದ 25 ಕೆಜಿ ಗಾಂಜಾ ಮತ್ತು ರೈತನನ್ನು ಗೋಕಾಕ್ ಗ್ರಾಮೀಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.

man arrested under ganja case in Belagavi
ಬೆಳಗಾವಿ ಗಾಂಜಾ ಪ್ರಕರಣ

By

Published : May 24, 2022, 9:42 AM IST

ಬೆಳಗಾವಿ: ಅಕ್ರಮವಾಗಿ ಗಾಂಜಾ ಬೆಳೆದ ರೈತನ ಜಮೀನಿನ ಮೇಲೆ ಪೊಲೀಸರು ದಾಳಿ ನಡೆಸಿದ್ದು, ರೈತ ಸೇರಿದಂತೆ ಆತನ ಹೊಲದಲ್ಲಿ ಬೆಳೆದಿದ್ದ 25 ಕೆ.ಜಿ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಗೋಕಾಕ ತಾಲೂಕಿನ ಮಿಡಕನಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಮಿಡಕನಹಟ್ಟಿ ಗ್ರಾಮದ ಶಿವಲಿಂಗಪ್ಪ ಸವಸುದ್ದಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ABOUT THE AUTHOR

...view details